by ಗೋವಿಂದದಾಸ
ಕರವೊಡ್ಡಿ ಬೇಡುವೆನು ಕಮಲದಳನೇತ್ರಕರುಣದಲಿ ಸಲಹೆನ್ನ ಕಾಮಹರ ಮಿತ್ರ ಪ
ಕಾಯದಲಿ ಬಲವಿಲ್ಲ ಕಂಗಳಿಗೆ ಸುಖವಿಲ್ಲಕೈಯ್ಯೊಳಗೆ ಹಣವಿಲ್ಲ ಬಾಯಬಲವಿಲ್ಲಕಾಯವಿದು ನೀನಿಟ್ಟ ಮಾಯಪಾಶಕೆ ಸಿಕ್ಕಿಹೇಯವಾದುದು ಸಲಹೋ ಹೇ ಲಕ್ಷ್ಮೀರಮಣ 1
ಕಾಲನಾಳುಗಳೆಮ್ಮ ಕಾಲಕೈಗಳಕಟ್ಟಿಕಾಲದಂಡದಿ ಬಡಿದು ಕಾಲನೆಡೆಗೈದೂಕಾಲಮೇಘದ ತೆರದಿ ಕಾಲನಂತೆ ಘರ್ಜಿಸುವಕಾಲದಲಿ ಕಾಯ್ವವರ ಕಾಣೆ ನಾಳಿನಲೀ 2
ಕರಿರಾಜನನು ಕಾಯ್ದೆ ಕಂಬದಲಿ ಮೈತೋರ್ದೆಖರ ದೂಷಣ ನಿನ್ನ ಕರದಿ ಶಿರ ವರಿದೀಕರುಣದಿಂದಲಿ ದ್ರೌಪದಿಯ ಸೆರಗಿಗಕ್ಷಯವಿತ್ತೆಕರವಿಡಿದು ಸಲಹೆನ್ನ ಕಲುಶ ಸಂಹಾರಾ 3
ಕಂದನಪರಾಧವನು ತಂದೆ ಕ್ಷಮಿಸುವ ತೆರದಿಕಂದುಕುಂದುಗಳೆನ್ನೊಳಿರಲು ನೀ ಕ್ಷಮಿಸಿಕಂದನಂದದಿ ನೋಡಿಕಂದರ್ಪಜನಕನೆಚಂದದಲಿ ಸಲಹೊ ಗೋವಿಂದದಾಸನನೂ 4
*******