ಪವಮಾನ ಪವಮಾನ ತವನವ ಪದ
ಪಲ್ಲವ ಜವ ತೋರಿಸೊ ಪ
ಶ್ರೀಕರ ಕಪಿಪ ಪಿನಾಕ ಹರಿಪಾದ
ಕೋಕನದ ಮಧುಪ ಕೃಪಾಕರ ಗುರುವರ 1
ಕ್ಷುಲ್ಲಕ ಮಲ್ಲಕ ಸು
ದಲ್ಲಣ ದ್ರೌಪದಿ
ವಲ್ಲಭ ಬಲ್ಲಿದ ಬಲ್ಲವರೂಪಿ 2
ಯತಿಕುಲಪತಿ ದಿತಿ ಸುತ ಮಥನನೆ
ಕ್ಷಿತಿ ಸುತೆ ಪತಿ ಕಥೆಯಲಿ ರತಿ ನೀಡ್ಹಿತದಲಿ 3
ಪ್ರೇಮದ ಕಾಮದ ರಾಮನ ಕ್ಷೇಮವ
ಭೂಮಿಜೆ ಗರುಪಿದ ವ್ಯೋಮಕೇಶನುತಾ 4
ಸಾಮಜಪುರ ಪತಿ ತಾಮಸ ಕೌರವ
ಸ್ತೋಮವಳಿದ ಸುತ್ರಾಮಜ ಪ್ರೀಯ ನಮೋ 5
ಕ್ಷುದ್ರಾ ದ್ವೈತರ ಸದ್ದಳಿದಾಮಲ
ಪದ್ಧತಿಗೈದ ಪ್ರಸಿದ್ಧ ಮಧ್ವಮುನಿ 6
ಸಿಂಧು ದಾಟಿ ಕುರು ವೃಂದ ವಳಿದ
ಕರ್ಮಂದಿಯ ಶಿರಿಗೋವಿಂದ ವಿಠಲಸುತ 7
****