..
ಪುಣ್ಯ ಪಡೆಯೆ ನೀನು ಪೂರ್ಣೇಂದುವದನೆ
ಪುಣ್ಯ ಪಡೆಯೆ ನೀನು ಪ
ಕುಂದಣದಾರತಿ ಬೆಳಗಿ ಅಕ್ಷತೆನಿಟ್ಟು ಆ-
ನಂದವಾಗಾಶೀರ್ವಾದ ಮಾಡ್ಹರಸುತಲಿ 1
ಅತಿ ಹರುಷದಿ ಗಂಡು ಸುತರನೆ ಪಡೆದು ನೀ
ಪೃಥಿವಿನಾಳೆನುತ ದ್ರೌಪದಿ ಹರಸಿದಳು2
ಅಕ್ಕರದಿಂದ್ಹೆಣ್ಣುಮಕ್ಕಳ ಪಡೆದು ಪ-
ಲ್ಲಕ್ಕಿನೇರೆನುತ ದೇವಕ್ಕಿ ಹರಸಿದಳು 3
ಕಟ್ಟಿದ್ದ ಮಾಂಗಲ್ಯ ಕರಿಯ ಕಾಜಿನ ಬಳೆ
ಮುತ್ತೈದೆತನಕೆ ಸಾವಿತ್ರಿ ಹರಸಿದಳು 4
ಅನ್ನ ಗೋವ್ಗಳು ಕನ್ಯಾದಾನ ಮಾಡೆನುತ ಸಂ-
ಪನ್ನ್ಯಾಗಿರೆನುತ ಅರುಂಧತಿ ಹರಸಿದಳು 5
ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ
ನೀ ಪಡೆ ಸುಖ ಶ್ರೀಮಹಾಲಕ್ಷ್ಮಿ ಹರಸಿದಳು 6
ಕಾಮಿತ ಫಲ ಇಷ್ಟದಾಯಕನಾದ ಶ್ರೀ
ಭೀಮೇಶಕೃಷ್ಣರಾಯನ ಕರುಣದಲಿ 7
***