Showing posts with label ರಾಘವೇಂದ್ರ ಗುರುವರ್ಯ ಮವiಘನಾಶನ gururama vittala. Show all posts
Showing posts with label ರಾಘವೇಂದ್ರ ಗುರುವರ್ಯ ಮವiಘನಾಶನ gururama vittala. Show all posts

Monday, 6 September 2021

ರಾಘವೇಂದ್ರ ಗುರುವರ್ಯ ಮವiಘನಾಶನ ankita gururama vittala

 kruti by ಗುರುರಾಮವಿಠಲ

ರಾಗ: [ಭಾಗ್ಯಶ್ರೀ] ತಾಳ: [ತಿಶ್ರನಡೆ (ಆದಿತಾಳ)]


ರಾಘವೇಂದ್ರ ಗುರುವರ್ಯ ಮವiಘನಾಶನ


ಬಾಗಿ ನಮಿಪೆ ನಿಮ್ಮ ಪಾದ ಪದ್ಮಕ್ಕನುದಿನ ಅ.ಪ


ಕನಕಕಶ್ಯಪನಾತ್ಮಜನೆಂದೆನಿಸಿ ಮೋದದಿ

ವನಜನಯನ ಸ್ಥಂಭದಿ ಬರುವಂದದಿ ಗೈದಿ 1

ವ್ಯಾಸಮುನಿರಾಯ ಪುರಂದರ ಗುರುವೆ 

ದೋಷರಹಿತ ಹರಿಭಕ್ತರಿಗೆ ಸುರತರುವೆ 2

ಗುರುರಾಮವಿಠಲನ ಪ್ರಿಯ ಕಿಂಕರವರೇಣ್ಯನೆ

ವರಮಂತ್ರಾಲಯನಿಲಯ ನೀ ಕರುಣಿಸೆನ್ನನೆ 3

***