Showing posts with label ವ್ಯರ್ಥ ಕಳೆವರೇನೊ ಕಾಲವ ಹೇ jagannatha vittala. Show all posts
Showing posts with label ವ್ಯರ್ಥ ಕಳೆವರೇನೊ ಕಾಲವ ಹೇ jagannatha vittala. Show all posts

Saturday, 14 December 2019

ವ್ಯರ್ಥ ಕಳೆವರೇನೊ ಕಾಲವ ಹೇ ankita jagannatha vittala

ಜಗನ್ನಾಥದಾಸರು
ವ್ಯರ್ಥ ಕಳೆವರೇನೊ ಕಾಲವ ಹೇ ಪ್ರಾಣಿ ನೀನು ಪ

ಕೀರ್ತಿಸದೆ ಕುವಾರ್ತೆಯಿಂದ ಅ.ಪ.

ನೇಸರನುದಯಿಸದ ಮುನ್ನ
ಕರ್ಮ ನಾಮ
ಬೇಸರದಲೇ ಸ್ಮರಿಸದೇ
ಗ್ರಾಸದ್ಹರಟೆಗಳನು ಹರಟಿ 1

ಪವನ ಮತವನವಲಂಬಿಸಿದ
ಸ್ಥವಿರ ಕವಿಗಳಿಂದ ಕಥಾ
ಶ್ರವಣ ರಸವ ಕಿವಿಯ ದಣಿಯೆ
ಸವಿದು ಸುಖಿಸಿ ಪ್ರವರನಾಗದೆ 2

ಕ್ಷಿತಿ ಜಲಾಗ್ನಿ ವಾಯು ಖಂ
ಅತುಳ ಬುದ್ಧಿ ಅಹಂಕಾರಗಳು
ಕೃತಿರಮಣನ ವಿಮಲ ಭಿನ್ನ
ಪ್ರತಿಮೆಯೆಂದರಿದು ಭಜಿಸದೆ 3

ಶ್ರೀಪಯೋಜ ಪೀಠ ಶೈಲ
ಚಾಪ ಗೋಪಮುಖರು ದ್ವಿತೀಯ
ರೂಪರೆಂದು ಹರಿಗೆ ನೀ ಪ
ದೇ ಪದೇ ನಮಸ್ಕರಿಸದೆ 4

ಪುತ್ರ ಜನನಿ ಜನಕ ವಿತ್ತ
ಕರ್ತ ಜಗನ್ನಾಥವಿಠಲ
ಕರ್ಮ ಕಠಿಣ ಕ್ರಿಯಾ
ಭೋಕ್ತನು ಮಿತ್ರನೆಂದರಿಯದೆ 5
*********