Showing posts with label ಪೊರೇ ಪೊರೇ ಮಂತ್ರನಿಲಯ ದೊರೆ tandevenkatesha vittala. Show all posts
Showing posts with label ಪೊರೇ ಪೊರೇ ಮಂತ್ರನಿಲಯ ದೊರೆ tandevenkatesha vittala. Show all posts

Monday, 6 September 2021

ಪೊರೇ ಪೊರೇ ಮಂತ್ರನಿಲಯ ದೊರೆ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಷಣ್ಮುಖಪ್ರಿಯ ತಾಳ: ಆದಿ


ಪೊರೇ ಪೊರೇ ಮಂತ್ರನಿಲಯ ದೊರೆ


ನತ ಶ್ರಿತರನು ಸಂತತ ಪತಿಕರಿಸುವ

ಪ್ರಥಿತಕೀರ್ತಿ ಮತ್ತಿತರರಿಗುಂಟೇ 1

ಕೋರಿಕೆ ಸಲಿಸಿ ಸಮೀರಸಮಯ ವರ

ಸಾರಸುಧಾರಸ ಭೂರಿಪ್ರಾಶನದಿ 2

ಕಾಲ ಕಳೆದೆ ಯಮನೂಳಿಗದವಗೇ-

ನ್ಹೇಳಲಾಪೇ ಪ್ರಹ್ಲಾದಗುರುವರಾ 3

ವೇನನ ಮತಘನಕಾನನವಹ್ನಿ ಸು-

ಧಾನುಮೋದಕ ಪ್ರಧಾನವಿದಗ್ಧ 4

ಶ್ರೀಶ ತಂದೆವೆಂಕಟೇಶವಿಠಲನ

ದಾಸ ಬೃಂದಾವನವಾಸ ಯತೀಶ 5

***

ಯಮನೂಳಿಗದವ=ಯಮಭಟ; ಪ್ರಧಾನವಿದಗ್ಧ=ಚೆನ್ನಾಗಿ ತಿಳಿದವ, ಪಂಡಿತ;