RSS song .
ನುಡಿದಂತೆ ನಡೆದವನ ಅಡಿಗೆನ್ನ ನಮನ
ಕತ್ತಲಲಿ ಬೆಳಕಿತ್ತ ನಿನಗೆನ್ನ ನಮನ ||ಪ||
ಪರದಾಸ್ಯ ಮುಸುಕಿರಲು ಪರತತ್ವ ತುಂಬಿರಲು
ಸ್ವಾಭಿಮಾನದ ಜ್ವಾಲೆ ಪ್ರಜ್ವಲಿಸಿ ಬೆಳಗಿಸಿದೆ
ಬರಿದಾದ ಭಾವಗಳ ಒಡೆದೊಡೆದ ಹೃದಯಗಳ
ಒಂದೆಡೆಗೆ ಬೆಸಹೊಯ್ದು ದುರ್ಭೇದ್ಯ ನಿರ್ಮಿಸಿದೆ ||೧||
ಬಡತನದ ಬೇಗೆಯಲಿ ಬರಿದಾದ ಸಿರಿತನದಿ
ಹಾಲಾಹಲವ ಕುಡಿದು ಅಮೃತವ ಸುರಿಸಿರುವೆ
ಹಗಲಿರುಳು ಇಲ್ಲದೆಯೇ ನಿಃಸ್ವಾರ್ಥ ಸೇವೆಯಲಿ
ಮೈ ಮನವ ದಂಡಿಸುತ ಆದರ್ಶ ಬೆಳೆಸಿರುವೆ ||೨||
ಬಹುಜನಕೆ ನೀ ತಿಳಿಯೆ ತಿಳಿದವಗೆ ನೀನೊಲಿವೆ
ಅವರೆಲ್ಲ ಹೃದಯಗಳ ದೇಗುಲದಿ ರಾಜಿಸುವೆ
ದೇಶಪ್ರೇಮವನೆರೆದು ಧ್ಯೇಯನಿಷ್ಠೆಯ ಬೆಳೆದು
ಆ ತಾಯಿ ಭಾರತಿಯ ವರಪುತ್ರ ನೀನಾದೆ ||೩||
***
nuDidaMte naDedavana aDigenna namana
kattalali beLakitta ninagenna namana ||pa||
paradAsya musukiralu paratatva tuMbiralu
svABimAnada jvAle prajvalisi beLagiside
baridAda BAvagaLa oDedoDeda hRudayagaLa
oMdeDege besahoydu durBEdya nirmiside ||1||
baDatanada bEgeyali baridAda siritanadi
hAlAhalava kuDidu amRutava surisiruve
hagaliruLu illadeyE niHsvArtha sEveyali
mai manava daMDisuta AdarSa beLesiruve ||2||
bahujanake nI tiLiye tiLidavage nInolive
avarella hRudayagaLa dEguladi rAjisuve
dESaprEmavaneredu dhyEyaniShTheya beLedu
A tAyi BAratiya varaputra nInAde ||3||
***