Showing posts with label ಹೊಯ್ಯೋ ಡಂಗುರವ ಜಗದಯ್ಯನಯ್ಯ ಶ್ರೀಹರಿಯಲ್ಲ purandara vittala. Show all posts
Showing posts with label ಹೊಯ್ಯೋ ಡಂಗುರವ ಜಗದಯ್ಯನಯ್ಯ ಶ್ರೀಹರಿಯಲ್ಲ purandara vittala. Show all posts

Saturday 7 December 2019

ಹೊಯ್ಯೋ ಡಂಗುರವ ಜಗದಯ್ಯನಯ್ಯ ಶ್ರೀಹರಿಯಲ್ಲ purandara vittala

ರಾಗ ಕಾಮವರ್ಧನಿ/ಪಂತುವರಾಳಿ. ಅಟ ತಾಳ

ಹೊಯ್ಯೋ ಡಂಗುರವ ಜಗ-
ದಯ್ಯನಯ್ಯ ಶ್ರೀಹರಿಯಲ್ಲದಿಲ್ಲವೆಂದು

ಅಷ್ಟೈಶ್ವರ್ಯದ ಲಕ್ಷ್ಮಿಯ ಅರಸನೆ
ಸೃಷ್ಟಿ ಸ್ಥಿತಿ ಲಯಾದ್ಯಷ್ಟಕರ್ತ
ಘಟ್ಟ್ಯಾಗಿದನು ತಿಳಿದು ಕೃಷ್ಣಾ ಎನದವರೆಲ್ಲ
ಭ್ರಷ್ಟರಾದರು ಇಹಪರಕೆ ಬಾಹ್ಯರೆಂದು ||

ಹರನೆನ್ನದೆ ಹರಿ ಹರಿಯೆಂದ ಬಾಲನ
ಕರುಣವಿಲ್ಲದೆ ಪಿತ ಕಾಡುತಿರೆ
ತರಳನ ನುಡಿ ಕೇಳಿ ನರಮೃಗ ರೂಪದಿ
ಹರಿನಿಂದಕನ ಸಂಹರಿಸಿದ ಮಹಿಮೆಯ ||

ಕರಿಯು ಆದಿಮೂಲ ಕಾಯೆಂದು ಮೊರೆಯಿಡೆ
ಸುರ ನಿಕರವು ನೋಡೆ ಬೆರಗಾಗಿ
ಭರದಿಂದಲಾಕ್ಷಣ ಗರುಡನೇರಿ ಬಂದು
ಕರಿರಾಜನ ಕಾಯ್ದ ಪರದೈವ ಹರಿಯೆಂದು ||

ಸುರಪಗೊಲಿದು ಬಲಿ ಶಿರವ ತುಳಿಯುವಾಗ
ಸುರನದಿ ಸೃಜಿಸಿದ ಹರಿಪಾದವ
ಪರಮೇಷ್ಟಿ ತೊಳೆಯಲಾ ಪವಿತ್ರೋದಕವನು
ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ ||

ಗರಳ ಜ್ವಾಲೆಗೆ ಅಂಜಿ ಸಿರಿರಾಮ ಎನ್ನುತ
ಸ್ಮರಣೆ ಮಾಡಲು ಉಮೆಯರಸನಿಗೆ
ಕೊರಳು ಶೀತಳವಾಗೆ ಗಿರಿಜೆಗೊಲಿದು ಆ
ವರರಾಮ ಮಂತ್ರವನೊರೆದಂಥ ಮಹಿಮೆಯ ||

ಮಾನಸ ಪೂಜೆಗೆ ಮೆಚ್ಚಿ ಮಹಾಲಿಂಗ
ಬಾಣನ ಬಾಗಿಲ ಕಾಯ್ದಿರಲು
ದಾನವ ವೈರಿಯು ತೋಳ ಖಂಡಿಸುವಾಗ
ಮೌನದಿಂದಲಿ ಚಂದ್ರಮೌಳಿದ್ದ ಮಹಿಮೆಯ ||

ಭಕ್ತಿಗೊಲಿದು ಶಿವ ಭಸ್ಮಾಸುರಗೆ ವರ-
ವಿತ್ತು ಬಾಧೆಯಿಂದ ಓಡುತಿರೆ
ಮತ್ತನಾದಸುರನ ಯುಕ್ತಿಯಿಂದಲಿ ಕೊಂದು
ಭಕ್ತರ ಸಲಹಿದ ಶಕ್ತ ಶ್ರೀಹರಿಯೆಂದು ||

ಹರಬೊಮ್ಮರ್ವರದಿಂದ ಸುರನು ದಶಶಿರ
ಸೆರೆಯ ಪಿಡಿದು ಸೇವೆಗೊಳುತಿರಲು
ಶರಧಿಯ ದಾಟಿ ಸಂಹರಿಸಿ ರಾವಣನನ್ನು
ಸುರರಿಗಭಯವಿತ್ತ ಪರದೈವ ಹರಿಯೆಂದು ||

ಜಗವ ಪೊರೆವನೀತ ಜಗಕಾಧಾರ ಮೂ-
ಜಗವ ಧರಿಸಿ ತನ್ನ ಜಠರದಲ್ಲಿ
ಮಗುವಾಗ್ಯಾಲದೆಲೆ ಮೇಲೆ ಮಲಗಿರ್ದ
ಜಗಜ್ಜನಕನು ಪುರಂದರವಿಟ್ಠಲನೆಂದು ||
***

pallavi

hoyyO Dangurava jagadayyanayya shrI hariyalladillavendu

caraNam 1

aSTaishvaryada lakSmIya arasane shrSTi sthiti layAdyaSTakarta
gaDyAgidanu tiLidu krSNA enadavarella bhraSTarAdaru ihaparake bAhyarendu

caraNam 2

haranennade hari hariyenda bAlana karuNavillade pita kADutire
taraLana nuDi kELi naramrga rUpadi hari nindakana samharisida mahimeya

caraNam 3

kariyu AdimUla kAyendu moreyiDe sura nikaravu nODe beragAgi
bharadindalA kSaNa garuDanEri bandu karirAjana kAida paradaiva hariyendu

caraNam 4

surapagolidu bali shirava tuLiyuvAga sura nadi shrgisida haripAdava
paramESTa toLeyalA pavitrOdakavanu hara tanna shiradalli dharisida mahimeya

caraNam 5

garaLa jvAlage anji siri rAma ennuta smaraNe mADalu umeya rasanige
koraLu shItaLavAge girijegolidu A vara rAma mantravanoredantha mahimeya

caraNam 6

mAnasa pUjege mecci mahAlinga bANana bAgila kAidiralu
dAnava vairiyu tOLa khaNDisuvAga maunadindali candramaulidda mahimeya
***

ಪುರಂದರದಾಸರು
ಹೊಯ್ಯಾಲೊ ಡಂಗುರವ ಜಗ |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.

ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1

ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2

ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3

ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4

ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5

ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6

ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7

ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8

ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
***