Showing posts with label ಇದೇವೆ ನರ ಪಶು ಕಾಣಿರ್ಯೋ ಇದೇ ಮನದ ಸ್ಥಿತಿ ನೋಡಿರ್ಯೋ gurumahipati. Show all posts
Showing posts with label ಇದೇವೆ ನರ ಪಶು ಕಾಣಿರ್ಯೋ ಇದೇ ಮನದ ಸ್ಥಿತಿ ನೋಡಿರ್ಯೋ gurumahipati. Show all posts

Thursday, 2 September 2021

ಇದೇವೆ ನರ ಪಶು ಕಾಣಿರ್ಯೋ ಇದೇ ಮನದ ಸ್ಥಿತಿ ನೋಡಿರ್ಯೋ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಇದೇವೆ ನರ ಪಶು ಕಾಣಿರ್ಯೋ | ಇದೇ ಮನದ ಸ್ಥಿತಿ ನೋಡಿರ್ಯೋ ಪ

 ಉದಯದಲೇಳುತ ಉದರದಿ ಧಾವತಿ | ಉದರ ತುಂಬಲು ನಿದ್ರಿಯ ಭರವು | ಮದದಲಿ ಭಯ ಕೊಟ್ಟಿಗೆಯಲಿ ಮಾಯದ | ಸದಮಲ ಪಾರದ ಬಂಧನವು 1 
ಸಂಚಿತ ನೊಗ ಹೆಗಲಲಿ ಪೊತ್ತು | ಘನ್ನದುರಿತ ಘಸಣೆಯ ತಳೆದು | ತನ್ನ ಹಿತಾ ಹಿತ ಲೇಶವ ನರಿಯದೆ | ಕಣ್ಣೆವೆಯಿಕ್ಕದೆ ಡೋಕುವನು 2 
ಗುರುವರ ಮಹಿಪತಿ ನಂದನ ಸ್ವಾಮಿಯು | ಹೊರೆವ ವಡಿಯನೆಂಬ ಗುರುತರಿದೇ | ಅನುದಿನ ಕಾವವ | ಸಿರಿಯ ಮದಾಂಧನ ನಂಬಿಹುದು 3
***