Showing posts with label ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರಿ krishnavittala. Show all posts
Showing posts with label ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರಿ krishnavittala. Show all posts

Monday, 2 August 2021

ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರಿ ankita krishnavittala

ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರೈಯ್ಯ ಬನ್ನಿರಿ ಪ


ಚಿನ್ನ ಕೃಷ್ಣನ ಚೆನ್ನಾಗಿ ನೆನೆದು ಪ್ರಸನ್ನ ಮಾಡಿರಿ ಅ.ಪ.


ಸತಿಯು ಸುತರು ಗತಿಯು ಎಂದು ಕೆಡಲು ಬೇಡಿರಿ

ಮಿತಿಯು ಇಲ್ಲ ಮೇರೆಯು ಇಲ್ಲ ಫಲವು ಇಲ್ಲ ಕೇಳಿರಿ

ಮತಿಯ ಹರಿಯ ಅಡಿಯಲ್ಲಿಟ್ಟು ಪ್ರೀತಿಮಾಡಿರಿ

ಗತಿಯನೀಡಿ ತ್ವರಿತದಿಂದ ಪೊರೆವ ನಿಮ್ಮ ನೊಡಿರಿ 1


ಅಂದು ಇಂದು ಎಂದು ಹೇಳಿ ಕಾಲ ಕಳೆಯ ಬೇಡಿರಿ

ಇಂದು ನಿಮ್ಮನು ಇಂದೆ ಶುಭ ಇಂದೆ ನೆನೆಯಿರಿ

ಬಂದು ಯಮನ ಭಟರು ಕರೆದರೆ ಏನು ಮಾಡೋರಿ

ಮುಂದೆ ಇಂಥ ಜನ್ಮಬಹುದೆ ಬಂಧ ನೂಕಿರಿ2


ಆಶಪಾಶ ಮೋಸ ಬಲುಕ್ಲೇಶ ತಿಳಿಯಿರಿ

ಹೇಸಿಕೆ ಸಂಸಾರವನು ಘಾಸಿಕೆ ನೋಡಿರಿ

ವಾಸವೇಶ ಜಯಮುನೀಂದ್ರ ವಾಯುಸ್ಥ ಕೃಷ್ಣ ವಿಠಲನ

ದಾಸನಾಗಿ ಗೆಜ್ಜೆಕಟ್ಟಿ ನಿರಾಶೆಯಿಂದ ಭಜಿಸಿರಿ 3

****