Showing posts with label ಬಂದೆವಯ್ಯ ಶ್ರೀ ಕೃಷ್ಣಮೂರ್ತಿ ನಿನ್ನ govinda. Show all posts
Showing posts with label ಬಂದೆವಯ್ಯ ಶ್ರೀ ಕೃಷ್ಣಮೂರ್ತಿ ನಿನ್ನ govinda. Show all posts

Thursday, 14 November 2019

ಬಂದೆವಯ್ಯ ಶ್ರೀ ಕೃಷ್ಣಮೂರ್ತಿ ನಿನ್ನ ankita govinda

by ಗೋವಿಂದದಾಸ
ಬಂದೆವಯ್ಯ ಶ್ರೀಕೃಷ್ಣಮೂರ್ತಿ ನಿನ್ನ ಸುಂದರಚರಣಾರವಿಂದ ನೋಡುವುದಕ್ಕೆ ಬಂದೆ ಪ

ಮಂದರೋದ್ಧರ ಅರವಿಂದ ನೇತ್ರಗೆ ನಮ್ಮೊ-ಳಿಂದು ಕೃಪೆಯ ತೋರಿ ಸಲಹೋ ಸಚ್ಚಿದಾನಂದ ಅ.ಪ

ಭಾವಸಂವತ್ಸರ ಪೌಷ ಬಹುಳಮವಾಸೆಮಹಾ ದೃಢದಿ ಸಮುದ್ರವ ಸ್ನಾನಗೈದುಆ ವಡಭಾಂಡೇಶ್ವರದಿಂದ ಬಲರಾಮದೇವರ ಕಂಡು ನಾವೆರಗಿ ಕೈಮುಗಿದೀಗ ಬಂದೆ 1

ಮಧ್ವಸರೋವರವೆಂಬ ತೀರ್ಥದಿ ಮಿಂದುಶ್ರದ್ಧೆ ಭಕ್ತಿಯೊಳ್ ನಿನ್ನ ಕಂಡು ಬಲಬಂದುಬದ್ಧಾಂಜಲಿಯ ನೀಡಿ ಸ್ಮರಿಸಿ ವಂದನೆಗೈದುಉದ್ಧರಿಸೆಂದು ವರವ ಬೇಡುವದನೀಗ ಬಂದೆ 2

ಅಷ್ಟಾವಧಾನ ಸೇವೆಯೊಳು ನಿನ್ನನುಯತಿಶ್ರೇಷ್ಠರು ಪೂಜಿಸಿ ವರವ ನೀಡಿ ಕೊಟ್ಟಮಂತ್ರಾಕ್ಷತೆ ತೀರ್ಥ ಪ್ರಸಾದವ ಪಡೆದುನಮ್ಮಯ ಭವಕಷ್ಟ ನೀಗುವುದಕ್ಕೆ ಬಂದೆ 3
*******