..
ಗೋಪಿ ನಿನ್ನ ಮಗನು ಬಂದು ತಾಪಿಸಿದ ಮಕ್ಕಳನ್ನು ಪ
ಕೋಪಿಸಬ್ಯಾಡವೆ ನೀನು ಭೂಪತಿಗ (ಳಿಗ್ಯೇಳೆ) ನುಅ. ಪ.
ಕಂಡವರ ಮನೆಯೊಳಿವನು ಪುಂಡುತನವ ಮಾಡಿದದುಮಕ್ಕಳೆಂಬುವನು ದಿಂಡೆತನವ ಮಾಡಿದನು 1
ಹಿತ್ತಿಲ ಬಾಗಿಲೊಳ್ಬಂದು ಒತ್ತಿದ ಹಾಲನ್ನೆ ತಂದವೃತ್ತಪಯೋಧರಿಯರ ಮುತ್ತಿನ ಹಾರವ ಕಳೆದ 2
ಬೆಣ್ಣೆಗಳ ಕದ್ದು ತಿಂದು ಮಣ್ಣಿನ ಭಾಂಡವನೊಡೆದಹೆಣ್ಣುಗಳ ಬೆನ್ನ ಬಡಿದ ಸಣ್ಣ ಮೊಲೆಗಳ ಪಿಡಿದ 3
ನಿದ್ರೆ ಹೊತ್ತಿನೊಳು ಬಂದು ಕ್ಷುದ್ರತನವ ಮಾಡುತ್ತನಿಂದಸದ್ದು ಮಾಡದಿರೆಯೆಂದ ಮುದ್ದು ಕೊಡುವೆ ನಿನಗೊಂದ 4
ಅರುಣೋದಯದಿ ಬಂದ ತರುಣಿ ನಿನ್ನ ಅಳಿಯನೆಂದತರಳಾಕ್ಷಿ ಬಾರೆನುವ ಸಿರಿ ಹಯವದನ ಬಂದ 5
***