Showing posts with label ಬಾರೋ ಭಾವಜನಯ್ಯ ಭಾನುಸಾಸಿರ prasannavenkata. Show all posts
Showing posts with label ಬಾರೋ ಭಾವಜನಯ್ಯ ಭಾನುಸಾಸಿರ prasannavenkata. Show all posts

Thursday, 14 November 2019

ಬಾರೋ ಭಾವಜನಯ್ಯ ಭಾನುಸಾಸಿರ ankita prasannavenkata

by ಪ್ರಸನ್ನವೆಂಕಟದಾಸರು
ಬಾರೋ ಭಾವಜನಯ್ಯ ಭಾನುಸಾಸಿರ ಮೈಯದೂರ ಮಾಡದಲೆನ್ನ ದುರಿತವಿದಾರಿ ಪ.

ಕಡೆ ಮೊದಲಿಲ್ಲದ ಕೆಡಕು ಯೋನಿಗೆ ಬಿದ್ದುಕಡಲಶಾಯಿ ನೀಯೆಂದು ಒಡಲ್ಹೊಕ್ಕೆನಿಂದು 1

ಕ್ಷಣಲವ ಮಾಳ್ಪಘಕೆಣಿಕೆ ಇಲ್ಲೆಲೆ ದೇವಘನಕೃಪೆಯಲಿ ನನ್ನ ಮನಮನೆಗಾಗಿ2

ಮುನ್ನೆ ನಿನ್ನಯ ಮೊರೆಯ ಅನುಕರಿಸಿದವರಮನ್ನಿಸಿ ಪೊರೆದ ಪ್ರಸನ್ನವೆಂಕಟದಾತ3
***

bArO BAvajanayya BAnu sAsira maiya
dUra mADadalenna durita vihAri ||pa||

kaDe modalillada keDaku yOnige biddu
kaDalaSAyi nIyaMdu oDalhokkeniMdu ||1||


kShaNalava mALpaGakeNake illelo dEva
Gana kRupeyali nanna manamanegAgi ||2||

munne ninnaya moreya anukarisidavara
mannisi kAyOdu prasannavenkaTa kRuShNa. ||3||
***

ಬಾರೋ ಭಾವಜನಯ್ಯ ಭಾನು ಸಾಸಿರ ಮೈಯ
ದೂರ ಮಾಡದಲೆನ್ನ ದುರಿತ ವಿಹಾರಿ ||ಪ||

ಕಡೆ ಮೊದಲಿಲ್ಲದ ಕೆಡಕು ಯೋನಿಗೆ ಬಿದ್ದು
ಕಡಲಶಾಯಿ ನೀಯಂದು ಒಡಲ್ಹೊಕ್ಕೆನಿಂದು ||೧||

ಕ್ಷಣಲವ ಮಾಳ್ಪಘಕೆಣಕೆ ಇಲ್ಲೆಲೊ ದೇವ
ಘನ ಕೃಪೆಯಲಿ ನನ್ನ ಮನಮನೆಗಾಗಿ ||೨||

ಮುನ್ನೆ ನಿನ್ನಯ ಮೊರೆಯ ಅನುಕರಿಸಿದವರ
ಮನ್ನಿಸಿ ಕಾಯೋದು ಪ್ರಸನ್ನವೆಂಕಟ ಕೃಷ್ಣ. ||೩||
*******