ವೃಂದಾವನದೊಳು ಆಡುವನಾರೇ ಗೋಪಿ
ಚಂದಿರವದನೆ ನೋಡುವ ಬಾರೆ ||ಪ||
ಅರುಣಪಲ್ಲವ ಪಾದಯುಗಳನೆ, ದಿವ್ಯ
ಮರಕತ ಮಂಜುಳಾಭರಣನೆ
ಸಿರಿವರ ಯದುಕುಲಸೋಮನೆ, ಇಂಥ
ಪರಿಪೂರ್ಣ ಕಾಮನಿಸ್ಸೀಮನೆ ||
ಹಾರಹೀರಗುಣಧಾರನೆ, ದಿವ್ಯ
ಸಾರಶರೀರ ಶೃಂಗಾರನೆ
ಆರಿಗಾದರು ಮನದೂರನೆ, ತನ್ನ
ಸೇರಿದವರ ಮಾತ ಮೀರನೆ ||
ಮಕರಕುಂಡಲ ಕಾಂತಿಭರಿತನೆ, ದಿವ್ಯ
ಅಕಳಂಕರೂಪಲಾವಣ್ಯನೆ
ಸಕಲರೊಳಗೆ ದೇವನೀತನೆ, ನಮ್ಮ
ಮುಕುತೀಶ ಪುರಂದರವಿಠಲನೆ ||
***
ರಾಗ ಶ್ರೀ / ಮಾಂಡ್ ಆದಿತಾಳ (raga, taala may differ in audio)
ರಾಗ : ಮಾಲಿಕ ರಚನೆ : ಪುರಂದರದಾಸರು
rAgA: tilang/mAND/rAgamAlika. Adi tALA.
P: brndAvanadoLu AduvanArE gOpa candra vadanana nODuvajArE
C1: aruNa pallava padayugaLanE divya marakata manjuLAbharaNanE
sirivarayadu kula sOmanE inthA paripUrNa kAma niSkAmanE
2: hArahira guNa dhAranE divya sAra sharIra shrngArananE
ArigAdaru mana dUranE tanna sErida vara mAtumIranE
3: makara kuNDala kAnti bharitanE divya akaLanka rUpa lAvaNyanE
sakala dEvaroLu ItanE namma mukutIsha purandaraviThalanE
(rAgamAlikA rAgAs: P & A-tilang, C1-behAg, C2-bhImpalAs)
***
pallavi
vrndAvanadoLu Aduvan yArE gOpi candravadana nODuva bAre
caraNam 1
aruNa pallava pADa yugagaLa divya marakata manjuLAbharaNane
sirivara yadukula sOmane intha paripUrNa kAma nissImane
caraNam 2
hAra hIra guNa dhArane divya sAra sharIra shrngArane
ArigAdaru mana dUrane tanna sEridavara mAta mIrane
caraNam 3
makara kuNDala kAnti bharitane divya akaLanka rUpa lAvaNyane
sakalaroLage dEvanItane namma mukutIsha purandara viTTalane
***
ವೃಂದಾವನದೊಳು ಆಡುವನ್ಯಾರೇ ಗೋಪಿ
ಚಂದಿರವದನೇ ನೋಡುವ ಬಾರೇ ।
ಅರುಣಪಲ್ಲವ ಪಾದಯುಗಳಲಿ , ದಿವ್ಯ
ಮರಕತ ಮಂಜುಳಭರಣನೇ
ಸಿರಿವರ ಯಧುಕುಲ ಸೋಮನೇ ,ಇಂಥಾ
ಪರಿಪೂರ್ಣ ಕಾಮ ನಿಸ್ಸಿಮನೇ ।।೧।।
ಹಾರ ಹೀರ ಗುಣಧಾಮನೇ ಸರ್ವ
ಸಾರ ಶರೀರ ಶೃಂಗಾರನೇ
ಆರಿಗಾದರೂ ಮನ ತೋರನೇ , ತನ್ನ
ಸೇರಿದವರ ಮಾತಮೀರನೇ ।।೨।।
ಮಕರಕುಂಡಲ ಕಾಂತಿ ಭರಿತನು, ದೇವ
ಅಕಳಂಕ ರೂಪ ಲಾವಣ್ಯನೇ ,ದಿವ್ಯ
ಸಕಲರೊಳಗೆ ದೇವನೀತನೇ ನಮ್ಮ
ಮುಕುಟೀಶ ಪುರಂದರ ವಿಠಲನೇ ।।
*******