Showing posts with label ಶ್ರೀತುಳಸಿ ದಯೆ ತೋರಮ್ಮ others. Show all posts
Showing posts with label ಶ್ರೀತುಳಸಿ ದಯೆ ತೋರಮ್ಮ others. Show all posts

Friday, 27 December 2019

ಶ್ರೀ ತುಳಸಿ ದಯೆ ತೋರಮ್ಮ others

ಶ್ರೀ ತುಳಸಿ ದಯೆ ತೋರಮ್ಮ ಅಮ್ಮ
ಶ್ರೀ ತುಳಸಿ ದಯೆ ತೋರಮ್ಮ ।

ಅರಿಶಿನ ಕುಂಕುಮ ಸೌಭಾಗ್ಯ ನೀಡಿ
ಚಿರಕಾಲ  ಕಾಪಾಡಮ್ಮ  ಅಮ್ಮ
ಶ್ರೀ ತುಳಸಿ ದಯೆ ತೋರಮ್ಮ ।।

ಜನಿಸಿದ ಮನೆಯ ಶಾಂತಿಯ ಉಳಿಸಿ
ವರಿಸಿದ ಮನೆಯ ಮನೆತನ ಬೆಳೆಸಿ ।
ತುಂಬಿದ ಸಂಸಾರ ಸಂತಸ ನೆಲೆಸಿ
ಎಂದೆಂದೂ ಇರಲು ಹರಸಮ್ಮ ತುಳಸಿ ।।   ಶ್ರೀ ತುಳಸಿ ।।

ಮುಂದಿನ ಬಾಳಿನ ದಾರಿಯ ತೋರಿಸಿ
ಮಕ್ಕಳ ಅರಿವಿನ ದೀಪವ ಬೆಳಗಿಸಿ ।
ಒಳ್ಳೆಯ ತಂದೆ -ತಾಯಿಯೆನಿಸಿ
ಎಂದೆಂದೂ ಇರಲು ಹರಸಮ್ಮ ತುಳಸಿ ।। ಶ್ರೀ ತುಳಸಿ ।।
********