Showing posts with label ಹರನ ಪಟ್ಟದ ರಾಣಿ ಪರಮ ಕಲ್ಯಾಣಿ ಕರುಣದಲಿ ankita bhupati vittala HARANA PATTADA RAANI KALYANI KARUNADALI. Show all posts
Showing posts with label ಹರನ ಪಟ್ಟದ ರಾಣಿ ಪರಮ ಕಲ್ಯಾಣಿ ಕರುಣದಲಿ ankita bhupati vittala HARANA PATTADA RAANI KALYANI KARUNADALI. Show all posts

Tuesday, 5 October 2021

ಹರನ ಪಟ್ಟದ ರಾಣಿ ಪರಮ ಕಲ್ಯಾಣಿ ಕರುಣದಲಿ ankita bhupati vittala HARANA PATTADA RAANI KALYANI KARUNADALI

 


kruti by bhupati vittalaru ( kakhandaki Ramacharyaru) 


ಹರನ ಪಟ್ಟದ ರಾಣಿ ಪರಮ ಕಲ್ಯಾಣಿ ಕರುಣದಲಿ ಕರ್ಣೇರದು ನೋಡು ಪನ್ನಗವೇಣಿ ಪ


ಮತಿಪ್ರೇರಕಳು ನೀನು ಪತಿಯ ಮನದ ಅಭಿಮಾನಿಸುತರು ಷಣ್ಮುಖನು ಗಜಮುಖ ಈರ್ವರುಪತಿಯು ನೆತ್ತಿಯಮೇಲೆ ಗಂಗೆಯನ್ನು ಹೊತ್ತಿಹನುಅತಿ ವಿಚಿತ್ರವು ನಿನ್ನ ಸಂಸಾರಸೊಬಗು 1

ತಂದೆಯ ಅಪಮಾನಹೊಂದಿ ಸವಿಸದೆ ಯಜ್ಞಕುಂಡದೊಳಗೆ ಹಾರಿ ನೀ ದೇಹಬಿಟ್ಟೆಗಂಡನಿಗೆ ಈ ಸುದ್ದಿ ಮುಟ್ಟಿದಾಕ್ಷಣ ನಿನ್ನತಂದೆಯ ರುಂಡವನು ಚೆಂಡಾಡಿದನು ಶಿವನು 2

ಶಿವಶಂಕರನು ಅವನು ಬನಶಂಕರಿಯು ನೀನುಭಸಿತ ಭೂತನವನು ಶಶಿಮುಖಿಯು ನೀನುರಾಮಭಕ್ತನು ಅವನು ಪೇಮಪುತ್ಪಳಿ ನೀನುಕಮಲಾಕ್ಷಿ ಭೂಪತಿ ವಿಠ್ಠಲಗೆ ಅತಿಪ್ರಿಯರು ನೀವು 3

ಶ್ರೀ ದತ್ತಾತ್ರೇಯ

***