Showing posts with label ಚರಣಸೇವೆಯ ನೀಡು ಗುರು ರಾಘವೇಂದ್ರ seetarama vittala. Show all posts
Showing posts with label ಚರಣಸೇವೆಯ ನೀಡು ಗುರು ರಾಘವೇಂದ್ರ seetarama vittala. Show all posts

Monday, 6 September 2021

ಚರಣಸೇವೆಯ ನೀಡು ಗುರು ರಾಘವೇಂದ್ರ ankita seetarama vittala

 ರಾಗ: ಪೂರ್ವಿಕಲ್ಯಾಣಿ ತಾಳ: ಆದಿ


ಚರಣಸೇವೆಯ ನೀಡು ಗುರು ರಾಘವೇಂದ್ರ


ಚರಣಸೇವೆಯ ನೀಡು ಕರುಣವನು ನೀ ಮಾಡು

ಶರಣುಬಂದೆನು ನನ್ನ ದುರಿತಗಳನೀಡ್ಯಾಡು ಅ.ಪ


ಅಸುರಕುಲಲತೆಯ ಹೊಸ ಕುಸುಮ ನೀನರಿದು

ಎಸೆವ ಪರಿಮಳವೆಲ್ಲ ದಿಸೆಗಳಲಿ ನೀ ಸುರಿದು

ವಸುಧೆಯಲಿ ನರಹರಿಯ ಕಂಭದಲಿ ನೀ ಕರೆದು

ಅಸಮಗುರು ನಿಂದಿರುವೆ ವರಗಳನು ಮಳೆಗರೆದು 1

ಯತಿಚಂದ್ರ ನೀನಾಗಿ ಹಿತದಿ ಚಂದ್ರಿಕೆ ಬೀರಿ

ಮತಿವಂತ ಮಹಿಮರಿಗೆ ಮಾರ್ಗವನು ತೋರಿ

ಅತಿಕ್ರೂರ ಕುಹುಯೋಗನೀಗೆ ಸಿಂಹಾಸನವೇರಿ

ಪ್ರತಿರಹಿತ ಶ್ರೀಕೃಷ್ಣಭಕ್ತಿ ಮೆರೆಸಿದ ಸೂರಿ 2

ಕಾಮಿತಾರ್ಥವ ಬೇಡಿ ಹೊಕ್ಕು ಮಂತ್ರಾಲಯವ

ನೇಮದಿಂದಲಿ ಬಂದ ಭಕ್ತರೆಲ್ಲರ ಭಯವ

ಸ್ವಾಮಿ ಸೀತರಾಮವಿಠಲ ಕಳೆಯುತ ದಯವ

ತಾ ಮಾಡಿ ತಂದೀವ ನಿನಗೆ ಕೀರ್ತಿಯ ಜಯವ 3

***