Showing posts with label ತೋರೊ ನಿನ್ನಯ ಮೂರ್ತಿಯ ಮೂರ್ತಿ ಬೀರೊ vijaya vittala. Show all posts
Showing posts with label ತೋರೊ ನಿನ್ನಯ ಮೂರ್ತಿಯ ಮೂರ್ತಿ ಬೀರೊ vijaya vittala. Show all posts

Wednesday, 16 October 2019

ತೋರೊ ನಿನ್ನಯ ಮೂರ್ತಿಯ ಮೂರ್ತಿ ಬೀರೊ ankita vijaya vittala

ತೋರೊ ನಿನ್ನಯ ಮೂರ್ತಿಯ
ಮೂರ್ತಿ ಬೀರೊ ಹೃದಯವೆಂಬೊ
ನೀರಜಹಾದೊಳಗೆ ಸಾರೋ ಸಾರಿ ಸಾರಿಗೆ ಸೇರೊ
ಬಾರೊ ಬಾರೊ ಪರಿವಾರದೊಡನೆ ಮನಸೂರೆಗೊಡುವೆ ಕಂ
ಸಾರಿ ಮುರಾರಿ ಪ

ತುಂಬೆ ವಿಶ್ವಮಾಯಾದ ಬೊಂಬೆ ನಾಮ ಪೀಯೂಷ
ಉಂಬೆ ಸೇವೆಯ ಕೈಕೊಂಬೆ ಅನ್ಯರ ನಂಬೆ
ಕಾಂಬೆ ನಮಿಸಿ ಪಾಲಿಸೆಂಬೆ ಕಾಲಿಗೆ ಮನ
ದುಂಬೆ ದಂತೆ ಎರಗಿ ಅಂಬೆ ಪಿಡಿವಾಕೊಂಬೆ
ಅಂಬುಜಾಕ್ಷ ನೀ
ನೆಂಬದು ಸುರನಿಕರಂಬ ಹಂಬಲಿಸಲು
ದಿಂಬಾಗಿ ಕರ್ಣಾವಲಂಬನವಾಯಿತು
ಇಂಬಿಡು ಪ್ರಾಙ್ಞನೆಂದೆಂಬ ಮೂರುತಿಯಾ1

ಸ್ನಾನ ಪ್ರಣಮ ವಾಚಾ ಮಾನದಿಂದಲಿ ಬಲು
ಮೌನವಾಗಿದ್ದು ಮಾಳ್ಪ ಧ್ಯಾನವು ಇತ್ತು ಮಾಜ್ಞಾನಾ
ನಾನಾ ಪ್ರಕಾರದಿಂದ ದಾನಧರ್ಮಂಗಳ ನಿ
ದಾನ ಕೊಂಡಡಲಾಮೇಲೆ ನೆನೆವೆನನುದಿನ
ಮಾನವನ ಹೀನವ ನಾಡದೆ ನೀನೆನಿಸದೆ
ಸುಮ್ಮನದಿಂದಲಿ ನೋಡೊ
ದಾನವನ ವಡಲನು ಬಗದು ಕರುಳನು
ವನಮಾಲೆ ಹಾಕಿದ ಶ್ರೀನಿಕೇತನ 2

ಇಂದು ಮಾಡುವದೇನು
ಚಂದ ಭಕ್ತರಿಗತಿ ಬಂಧವನೆ ಯಾಕೆಂದಾ
ಅಂದ ರಕ್ಕಸನಾಗಿ ಕೊಂದಾವರದ ಮುಕ್ಕುಂದಾ
ವಂದಿತ ಮರ ವೃಂದಾ ಕರುಣದಿಂದಾ
ಎಂದಿಗೆಂದಿಗೆ ಎನ್ನಿಂದಗಲದೆ ಗೋ
ವಿಂದ ಇಂದಿರಾಪತಿ ಸುಂದರ ವಿಗ್ರಹ
ಮಂದಿರದೊಳು ಸುಮದಾಸನದಲ್ಲಿ
ಬಂದು ವಿಜಯವಿಠ್ಠಲೆಂದು ನೀನಿಂದು3
*********