Showing posts with label ಶ್ರೀಸಿದ್ಧಿಗಣಪ ಕೊಡು ನಿನ್ನ ನೆನಪ ಘಾಸಿ ತಿಮಿರದಿನ lakshmikanta. Show all posts
Showing posts with label ಶ್ರೀಸಿದ್ಧಿಗಣಪ ಕೊಡು ನಿನ್ನ ನೆನಪ ಘಾಸಿ ತಿಮಿರದಿನ lakshmikanta. Show all posts

Sunday, 1 August 2021

ಶ್ರೀಸಿದ್ಧಿಗಣಪ ಕೊಡು ನಿನ್ನ ನೆನಪ ಘಾಸಿ ತಿಮಿರದಿನ ankita lakshmikanta

 ..


kruti by ಲಕ್ಷ್ಮೀನಾರಯಣರಾಯರು Lakshminarayanaru 


ಶ್ರೀ ಸಿದ್ಧಿಗಣಪ ಕೊಡು ನಿನ್ನ ನೆನಪ ಘಾಸಿ ತಿಮಿರದಿನಪ ಪ


ಈಶನ ವರಸುತ ದಾಸ ಜನರ ಹಿತ ಪಾಶಾಂಕುಶ ಹಸ್ತ ಅ.ಪ


ವಿದ್ಯೆ ಪ್ರದಾಯಕ ಬುದ್ಧಿ ಪ್ರಬೋಧಕ ಸಿದ್ಧಿದ ಶ್ರೀ ಬೆನಕ

ಹೊದ್ದಿ ನೆನೆವ ಭಕ್ತರುದ್ಧರಿಸುವ ಶಕ್ತ ಮುದ್ದು ಮುಖವ ತೋರಿತ್ತ 1


ಗಿರಿಜೆ ಸತ್ಕುವರನೆ ದ್ವಿರದ ಸುವದನನೆ ಶರಣರ ಪಾಲಿಪನೆ

ಕರುಣ ಮಹೋಧದಿ ವರಗುಣಮಣಿ ನಿಧಿ

ಪೊರೆಯನ್ನ ಸದ್ದಯದಿ 2


ಕಿಂಕರ ಶಂಕರ ಶತ್ರುಭಯಂಕರ ಶಂಖಚಕ್ರಾಬ್ಜಧರ

ಸಂಕಟ ಪರಿಹರ ಮಂಕು ಕಳೆವ ಧೀರ

ಪಂಕಜ ಮುಖವ ತೋರ 3


ರಕ್ತ ವಸ್ತ್ರಾನ್ವಿತ ರಕ್ತ ಗಂಧಾಕ್ಷತ ರಕ್ತ ಮಾಲಾದಿಧೃತ

ಭಕ್ತ ಜನಾವನ ಶಕ್ತನೆ ನೀ ಎನ್ನ ಚಿತ್ತದಿ ಪೊಳೆಯೊ ಘನ್ನ 4


ಬಾದರಾಯಣಪ್ರಿಯ ಭಾಗವತಧ್ಯೇಯ

ವೇದನಿಕರ ಸುಗೀಯ

ಆದಿ ಸಂಪೂಜಿತ ಮೋದಕ ಸುಪ್ರೀತ

ಸಾಧು ಸಜ್ಜನ ಸಮ್ಮತ 5


ಅಂಬರಾಧಿಪ ನಿನ್ನ ಉದರದಿ ಜಗವನ್ನ

ಇಂಬಿಟ್ಟಿಯೆಂದು ನಿನ್ನ

ಲಂಬೋದರನೆಂದು ವಿಶ್ವಂಭರನೆಂದು

ಅಂಬರೊ ಸುಗುಣಸಿಂಧು 6


ವಕ್ರವ ತುಂಡಿಪ ಕತದಿಂದಲಪ್ಪ ವಕ್ರತುಂಡನು ನೀನಪ್ಪ

ಶಕ್ರ ಪೂಜಿಸಿದನು ವೃತ್ರನ ವಧೆಗಿನ್ನುಪಕ್ರಮದಲೆ ತಾನಿನ್ನು 7


ದುರಿಯೋಧನ ನಿನ್ನ ಮರೆತ ಕಾರಣ ತನ್ನ

ಪರಿವಾರಸಹಿತ ಘನ್ನ

ಧುರದಲ್ಲಿ ಬಿದ್ದನು ವರ ಧರ್ಮ ಗೆದ್ದನು ಎರಗಿ ಅರ್ಚಿಸಿ ನಿನ್ನನು 8


ದುರಳ ದಶಾನನ ಸರಕುಮಾಡದೆ ನಿನ್ನ ಗರುವದಿಂದಿರಲವನ

ಪರಿಭವ ಕಾರಣವಾದುದೆಂಬರು ಕಣ ಶರಣಜನಾಭರಣ 9


ಉರುಪರಾಕ್ರಮಿ ರಾಮ ಅರಿತು ಭಜಿಸಿ

ನೇಮದಿರುತಿದ್ದು ಹೇ ಮಹಿಮ

ಖರ ದಶಶಿರನನ್ನು ಧುರದಲ್ಲಿಗೆದ್ದನು ಕರುಣೆಯೆ ಒರೆಯಲೇನು 10


ತಾರಕವಧೆಗೆಂದು ಶೂರ ಷಣ್ಮುಖ ಬಂದು

ಕೋರಲು ಸಿದ್ಧಿ ಅಂದು

ತೋರಿದೆ ಕರುಣವ ಚಾರುಕರದಿ ಅವನಾರೈಸಿ ಕರುಣಾರ್ಣವ 11


ಮುಪ್ಪುರ ಗೆದ್ದನು ಮುಕ್ಕಣ್ಣ ನಿನ್ನನು ತಪ್ಪದೆ ನೆನೆದವನು

ಅಪ್ಪನೆ ನಿನ್ನಯ ಗೊಪ್ಪ ಚರಿತ್ರೆಯ ಇಪ್ಪಂತೆ ಪೇಳಿಸಯ್ಯ 12


ಸೃಷ್ಟಿಕರ್ತನು ತನ್ನ ಸೃಷ್ಟಿಗೈಯ್ಯಲು ಮುನ್ನ ಮುಟ್ಟಿಭಜಿಸಿದ ನಿನ್ನ

ಎಷ್ಟೆಂತ ಪೇಳಲಿ ಶ್ರೇಷ್ಠಗುಣಾವಳಿ ಅಷ್ಟೆಲ್ಲ ನೀನೆ ಬಲ್ಲಿ 13


ಬಂದಪವಾದವ ನಂದಿಸೆ ಮಾಧವ ಪೊಂದಿದ ನಿನ್ನನವ

ದಂದುಗ ಪರಿದುದು ಸಂದೆಗ ಪೋದುದು

ದ್ವಂದ ವಿವಾಹಾದುದು 14


ಭಾರತ ಬರೆಯಲು ಆಕಾರ ನೋಡಲು ತೋರದೆ ಇರುತಿರಲು

ಶೂರನೆ ನಿನ್ನನು ಅರಿಸಿ ವ್ಯಾಸನು ಬೀರಿದ ಮಹಿಮೆಯನು 15


ಏನು ಕರುಣವಯ್ಯ ಶ್ರೀನಿಕೇತನಿಗೈಯ್ಯಾ ತಾನೆ ಇತ್ತಿಹನಯ್ಯ

ಆನತಿಸಲು ಇಷ್ಟ ಮಾಣಲು ಸಂಕಟ ನೀನು ಕೊಡೆನುತದಟ 16


ಭಜಿಪರ ಭಾಗ್ಯದ ಯಜಿಪರಭೀಷ್ಟದ ತ್ಯಜಿಪರ ಸಂಕಟದ

ಗಜಮುಖ ನಿನ್ನಡಿ ಕುಜದ ನೆಳಲ ನೀಡಿ ನಿಜ ಬಿರುದಗಳ ಪಡಿ 17


ಜಯ ಜಯ ಸುಮುಖನೆ ಜಯ ಏಕದಂತನೆ

ಜಯ ಜಯ ಕಾಪಿಲನೆ

ಜಯ ಗಣಾಧ್ಯಕ್ಷನೆ ಜಯ ಫಾಲ ಚಂದ್ರನೆ ಜಯ

ಜಯ ಗಜಮುಖನೆ 18

ದ್ವಾದಶ ನಾಮವ ಆದರದಿಂದಾವ ಓದುವ ಕೇಳುವವ

ಬಾಧಿಪ ವಿಘ್ನವ ಪಾರ್ದು ತಾಂ ಪೋಗುವ

ಆದಿ ಪೂಜಿತನೊಲಿವ 20

ವಿದ್ಯಾರಂಭದಿ ಮುದ್ದು ವಿವಾದÀದಿ ಪೊದ್ದಲ್ಲಿ ನಿರ್ಗಮದಿ

ಯುದ್ಧದಿ ನಿನ್ನನು ಬದ್ಧದಿ ನೆನೆವನು ಗೆದ್ದಪನೈ ಅವನು 21


ಏಕವಿಂಶತಿಪದ ಕೋಕನಪುಷ್ಪದ ಶ್ರೀಕರ ಮಾಲೆ ಇದ

ಶ್ರೀಕಾಂತ ವರಭಕ್ತ ನೀ ಕರುಣಿಸೆಂದಿತ್ತ ಸ್ವೀಕರಿಸೈ ಮಹಂತ 22

ಬೆಂಗಳೂರಿನಲಿ ತುಂಗರೂಪದಲ್ಲಿ ಕಂಗೊಳಿಸುತಲಿಲ್ಲಿ

ಮಂಗಳೇಕ್ಷಣದಿಂದ ಡಿಂಗರಿಗರ ವೃಂದ

ಹಿಂಗದೆ ಪೊರೆವೆನೆಂದ 23


ಬಾಲಕೃಷ್ಣಾರ್ಯರ ಬಾಲ ಲಕ್ಷ್ಮೀನಾರಾಯಣನೆಂಬ ಸತ್ಪೆಸರ

ತಾಳಿದ ಶರಣನು ಮೇಳೈಸೀನುತಿಯನು ಓಲಗಿಸಿದ ನಿನ್ನನು 24


ಒಂದೊಂದು ನುಡಿಯನು ಚಂದದಿ ನುಡಿವನು

ಪೊಂದುವ ಮೋದವನು

ಇಂದುಧರನ ಸುತನಂದದಿ ಸದ್ಭಕ್ತವೃಂದ ರಕ್ಷಿಪ ಸಂತತ 25


ಅಖುವಾಹನ ನಮೋ ಏಕದಂತನೆ

ನಮೋ ಸಾಕುವ ಮಹಿಮ ನಮೋ

ಭೀಕರ ಬಿಡಿಸೆನ್ನ ನೀ ಕರುಣಿಸು ಮುನ್ನ ಶ್ರೀಕಾಂತ ಭಕ್ತಿಘನ್ನ 26

ಮಂಗಳ ಸದ್ವಿದ್ಯಾಬುದ್ಧಿದ ಜಯ ಜಯ ಮುಂಗಳ ಸಿದ್ಧದನೆ

ಮಂಗಳ ಮುದ್ದು ವಿನಾಯಕ ಜಯ ಜಯ

ಮಂಗಳ ವರ್ಧಿತನೆ 27

***