Showing posts with label ಎಂದಿಗೆ ನಿಮ್ಮ ಪದ ಕಾಂಬೆನೊ ಗುರು ಎಂದಿಗೆ gopalakrishna vittala. Show all posts
Showing posts with label ಎಂದಿಗೆ ನಿಮ್ಮ ಪದ ಕಾಂಬೆನೊ ಗುರು ಎಂದಿಗೆ gopalakrishna vittala. Show all posts

Sunday, 1 August 2021

ಎಂದಿಗೆ ನಿಮ್ಮ ಪದ ಕಾಂಬೆನೊ ಗುರು ಎಂದಿಗೆ ankita gopalakrishna vittala

ಎಂದಿಗೆ ನಿಮ್ಮ ಪದ ಕಾಂಬೆನೊ | ಗುರು

ಎಂದಿಗೆ ನಿಮ್ಮ ಪದ ಕಾಂಬೆನೊ ಪ.


ಎಂದಿಗೆ ನಿಮ್ಮ ಕಾಂಬೆ

ಅಂದಿಗೆ ಮುಕ್ತಳಹೆ ಅ.ಪ.


ಸಕಲ ಶಾಸ್ತ್ರಗಳನೆ ಶೋಧಿಸಿ | ಬಹು

ಅಕಳಂಕ ತತ್ವವ ಸಾಧಿಸಿ | ಬೇಗ

ಮುಕುತಿ ಯೋಗ್ಯರಿಗೆಲ್ಲ

ಸುಖವ ತೋರುವ ಗುರು 1

ಮನದಿ ನೆಲಸಿ ಲೀಲೆ ತೋರುತ | ದೃಢ

ಮನದಿ ಮನಸಿಜನ ಗೆಲ್ಲುತ | ದೇವ

ಮನಸಿಜನಯ್ಯನ

ಮನಸಿನೊಳ್ ತೋರುತ 2

ಕಷ್ಟಪಡುವುದು ಕಾಣುತ | ಬಹು

ತುಷ್ಟರಾಗಿ ಅಭಯ ನೀಡುತ | ಮನ

ಮುಟ್ಟಿ ರಕ್ಷಿಪೆನೆಂದು

ಇಷ್ಟು ಸಲಿಪ ಗುರು 3

ನರಹರಿ ಧ್ಯಾನಿಪ ಶ್ರೀ ಗುರು | ಬಹು

ಕರುಣಾಳುವೆ ದೇವತರು | ನಿಮ್ಮ

ಅರಘಳಿಗೆ ಬಿಟ್ಟು

ಇರಲಾರೆ ಧರೆಯೊಳು 4

ಮುಕ್ತಿ ಸೌಭಾಗ್ಯವ ನೀಡುವ | ಬಹು

ಶಕ್ತರಹುದು ನಿಮ್ಮ ಭಾವವ | ನಾನು

ಎತ್ತ ಯೋಚಿಸೆ ಕಾಣೆ

ಸತ್ಯವಚನವಿದು 5

ಆನಂದಪಡಿಸುವ ಶ್ರೀ ಗುರು | ನಿಮ್ಮ

ಏನೆಂದು ಸ್ತುತಿಹಲಿ ಪಾಮರರು | ನಿಮ್ಮ

ಕಾಣರು ಜಗದಲಿ

ಏನೆಂಬೆ ಮಹಿಮೆಯ 6

ಗೋಪಾಲಕೃಷ್ಣವಿಠ್ಠಲನ | ಶುಭ

ರೂಪವ ತೋರುವ ಕಾರುಣ್ಯ | ದೇವ

ಈ ಪರಿ ನಿಮ್ಮ ಸ್ತುತಿಸಿ

ನಾ ಪಾರು ಕಾಂಬೆನು 7

****