ಉಮಾದೇವಿಯೆ ನಿನ್ನ ನಮಿಪೆ ಅನುದಿನ
ಚರಣಕಮಲವ ತೋರಮ್ಮ ನಮ್ಮಮ್ಮಾ ಪ
ಮನೋಭಿಮಾನಿಯೇ ಎನ್ನವಗುಣಗಳೆಣಿಸದೆ ತ್ವರಿತದಿ
ಬಂದು ಮುತ್ತಿನ ಗದ್ದಿಗೆಯನೇರಮ್ಮ ನಮ್ಮಮ್ಮಾ ಅ.ಪ
ದಕ್ಷಕುವರಿ ದಾಕ್ಷಾಯಿಣಿ ಗೌರಿ ಪಕ್ಷಿವಾಹನನ ಸೋದರಿ
ಈಕ್ಷಿಸುತಿರುವೆನು ಉಪೇಕ್ಷಿಸದೆ ಎನ್ನ
ರಕ್ಷಿಸಿ ಕಾಯೆ ಪಾರ್ವತಿ ತಾಯೆ
ಶಂಭುದೇವನ ರಾಣಿ ಹೃದಯಾಂಬರದೊಳು ನಿಂದು
ಬಿಂಬವ ತೋರೆ ಜಗದಾಂಬ ಅಂಬರ ಪೂಜಿತೆ
ನಂಬಿದ ಭಕ್ತರ ಪೊರೆವ ಸದ್ಗುಣ ಚರಿತೆ 2
ಗೆಜ್ಜೆ ಪಾದಗಳಿಂದ ಘಲ್ ಘಲ್ ಎನುತ ಬಾರಮ್ಮ
ಹೆಜ್ಜೆಯನಿಡುತ ಮುಗುಳ್ನಗೆ ನಗುತ ಬಾರಮ್ಮ
ಸುe್ಞÁನ ಮತಿಯಿತ್ತು ಕಾಯುವ ತಾಯಿ ಬಾರಮ್ಮ
ಉಟ್ಟ ಪೀತಾಂಬರ ತೊಟ್ಟ ಕಂಚುಕ ಪಟ್ಟೆಯ ಪದಕ
ಕಟ್ಟಿದ ಕಠಾಣೆ ಮುತ್ತಿನಮೂಗುತಿ ಪಚ್ಚೆಯ ಓಲೆ
ಇಟ್ಟ ಕಸ್ತೂರಿತಿಲಕ ಕೆತ್ತಿದ ಕಿರೀಟ ಹೊಳೆಯುತ
ಬೇಡಿಕೊಂಬೆವೆ ತಾಯೆ ನೀ ಎನ್ನ ಆಪತ್ತು ಪರಿಹರಿಸಿ
ಪಾಡಿ ಪೊಗಳಿ ಕೊಂಡಾಡುವೆ ಕಾಯೆ ತಾಯೆ
ಬೇಡಿದ ವರಗಳ ರುಕ್ಮಿಣೀಶವಿಠಲನ ಕರುಣದೆ ನೀಡೆ ತಾಯೆ 5
***