Showing posts with label ಕರುಣಾ ಸಾಗರ ಬಿರುದ ತರಣೋಪಾಯದೋರುದ ಸ್ಮರಿಸೊ mahipati. Show all posts
Showing posts with label ಕರುಣಾ ಸಾಗರ ಬಿರುದ ತರಣೋಪಾಯದೋರುದ ಸ್ಮರಿಸೊ mahipati. Show all posts

Wednesday 1 September 2021

ಕರುಣಾ ಸಾಗರ ಬಿರುದ ತರಣೋಪಾಯದೋರುದ ಸ್ಮರಿಸೊ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕರುಣಾ ಸಾಗರ ಬಿರುದ ತರಣೋಪಾಯದೋರುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 1 

ತ್ವರಿತ ಪುಣ್ಯಗೈಸುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 2 

ಹರುಷನಾಗಿ ಸೂಸುದ ಗುರುತವಾಗಿ ಭಾಸುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 3 

ಅರಹುಪೂರ್ಣನೀಡುವ ಕುರುಹುಮಾಡಿ ಕೂಡುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 4 

ಹರಿಯ ತಂದುಗುಡುದ ಸಿರಿಯ ಸೌಖ್ಯಲಿಡುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 5 

ಸಾರಸೇವಿಸುವದ ಗುರುಪಾದಾರವಿಂದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 6 

ಬೆರೆದು ಘನಗೂಡುದ ಹರುಷ ಮಹಿಪತಿಗ್ಯಾಗುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 7

***