by ಪ್ರಸನ್ನವೆಂಕಟದಾಸರು
ಆರೆನ್ನ ಉಳುಹುವರೈ ರಂಗ
ಘೋರಾರಣ್ಯ ಭವದಿ ಸಿಕ್ಕಿದೆ ರಂಗ ಪ.
ಎಂಟು ಕಾಡಾನೆ ಎಂಟು ಕಡೆಯಲಿ
ನಿಂತಿವೆಗಂಟನಿಕ್ಕಿವೆ ಮೂರು ದಳ್ಳುರಿಯ
ಸುಂಟರಗಾಳ್ಯೆಬ್ಬರಿಸಲು ಗಿಡಗಂಟಿಲಿ
ಬಿದ್ದೆ ನೀನಲ್ಲದೆನ್ನ 1
ಹುಲಿಯೊಂದು ಗುಡುಗುಡಿಸುತಿದೆ
ಭಯಂಕರಬಲು ತೋಳೆರಡು
ಕೆಕ್ಕರಿಸುತಿವೆಸಲುಗೆಯ ಕೋತಿಯೊಂದಣ
ಕಾಡುತಲಿದೆಮೇಲೆ ಕರಡಿಯು ಹತ್ತೆಳವುತಿದೆ 2
ಕಾಳುರಗನ ಕಟ್ಟು ಮೈತುಂಬ ನನ್ನ
ನಾಲಿಗೇಳದು ನಿನ್ನ ಕರೆಯಲಿಕೆ ನಿನ್ನಾಳಟ್ಟಿ
ಕರೆಸಿಕೊಳ್ಳೆಲೆ ತಂದೆ ನಾಗೋಳಿಟ್ಟೆ
ಪ್ರಸನ್ನವೆಂಕಟ ಬಂಧು 3
******
ಆರೆನ್ನ ಉಳುಹುವರೈ ರಂಗ
ಘೋರಾರಣ್ಯ ಭವದಿ ಸಿಕ್ಕಿದೆ ರಂಗ ಪ.
ಎಂಟು ಕಾಡಾನೆ ಎಂಟು ಕಡೆಯಲಿ
ನಿಂತಿವೆಗಂಟನಿಕ್ಕಿವೆ ಮೂರು ದಳ್ಳುರಿಯ
ಸುಂಟರಗಾಳ್ಯೆಬ್ಬರಿಸಲು ಗಿಡಗಂಟಿಲಿ
ಬಿದ್ದೆ ನೀನಲ್ಲದೆನ್ನ 1
ಹುಲಿಯೊಂದು ಗುಡುಗುಡಿಸುತಿದೆ
ಭಯಂಕರಬಲು ತೋಳೆರಡು
ಕೆಕ್ಕರಿಸುತಿವೆಸಲುಗೆಯ ಕೋತಿಯೊಂದಣ
ಕಾಡುತಲಿದೆಮೇಲೆ ಕರಡಿಯು ಹತ್ತೆಳವುತಿದೆ 2
ಕಾಳುರಗನ ಕಟ್ಟು ಮೈತುಂಬ ನನ್ನ
ನಾಲಿಗೇಳದು ನಿನ್ನ ಕರೆಯಲಿಕೆ ನಿನ್ನಾಳಟ್ಟಿ
ಕರೆಸಿಕೊಳ್ಳೆಲೆ ತಂದೆ ನಾಗೋಳಿಟ್ಟೆ
ಪ್ರಸನ್ನವೆಂಕಟ ಬಂಧು 3
******