ಶ್ರೀಧವ ಮಾಮವ ಪ್ರಣತ ಜಾನರ್ತಿ ಹರಭೋ
ಭೂಧರಜಾವರನುತಪದ ಪ
ಸಾದರದಲಿ ನಿನ್ನಾ ಪಾದವ ಭಜಿಸುವೆ ನಾ
ಮೋದವ ಕೊಡು ಕರುಣಾಂಬೋಧಿಯೆ
ಮಧು ಮಥನಾ ಸದಾಮಲಾಚರಿತನೆ
ಒದಗಿಸುತವ ಪದದಲಿ ಮನ 1
ನತಜನ ಕೃತ ಕರುಣಾ ಶ್ರೀತಜನರಘಹರಣ
ಶೃತಿಗಣನುತ ಶರಣಾಗತ ಜನವತ್ಸಲನ
ನತಿಸುವೆ ಸತತದಿ ರತಿಪತಿ ಪಿತಕರ
ಪಿಡಿವದು 2
ಧರಿ ಸುರ ಜನ ಪ್ರಿಯಾ ಕರುಣದಿ ಭವಮಾಯಾ
ಪರಿಹರಿಸೆಲೊ ಜೀಯಾ ವರಕಾರ್ಪರ ನಿಲಯಾ
ನರಹರಿ ವಿಠಲನೆ ವರಪಿಪ್ಪಲತರು ಸಂಸ್ಥಿತ 3
****