Showing posts with label ಜೋ ಜೋ ಜೋ ಜೋ ಜೋ ಗುರುರಾಜಾಜೋ gurugovinda vittala. Show all posts
Showing posts with label ಜೋ ಜೋ ಜೋ ಜೋ ಜೋ ಗುರುರಾಜಾಜೋ gurugovinda vittala. Show all posts

Friday, 27 December 2019

ಜೋ ಜೋ ಜೋ ಜೋ ಜೋ ಗುರುರಾಜಾಜೋ ankita gurugovinda vittala

ಜೋ ಜೋ ||pa||

ಜೋ ಜೋ ಜೋ ಜೋ ಜೋ ಗುರುರಾಜಾಜೋ ಜೋ ಜೋ ಜೋ | ಯತಿ ಮಹರಾಜಾ | ಜೋಜೋ ||a.pa||

ಮೋದ ಮುನಿ ಮತವವಾದಿಗಳ ಜಯಿಸುತ್ತ | ವೇದಾರ್ಥ ಪೇಳಿ |ಸಾಧು ಸಮ್ಮತವೆನೆ |
ಗ್ರಂಥ ಬಹು ರಚಿಸೀ ಆದುದಾಯಾಸವು | ಮಲಗೊ ಗುರುರಾಯ | ಜೋ ಜೋ ||1||

ಯೋಗಿಗಳೊಡೆಯನೆ | ಯೋಗೀಂದ್ರ ವಂದ್ಯಾಭೋಗಿ ಶಯ್ಯನ ಭಕ್ತ | ಗುರುರಾಘವೇಂದ್ರ |
ಭಾಗವತರ ಬಯಕೆ | ಸಲಿಸಿ ವೇಗದಲಿಂದಯೋಗ ನಿದ್ರೆಯ ಮಾಡೆ | ಮಲಗೊ ಮುನೀಂದ್ರಾ | ಜೋಜೋ ||2||

ಎರಡೆರೆಡು ಮುಖದಿಂದ | ವೃಂದಾವನದಿಂದಶರಣರಿಗಾನಂದ | ಸುರಿಸಿ ಹರಿಯಿಂದ |
ಗುರು ಗೋವಿಂದ ವಿಠಲನ | ಧ್ಯಾನ ಆನಂದಪರವಶದಲಿ ಮಲಗೊ | ಗುರು ರಾಘವೇಂದ್ರ | ಜೋಜೋ ||3||
******