Showing posts with label ಮಾಯದ ಸಂಸಾರ ಮಮಕಾರ ಹಿಂಗಿತು purandara vittala MAYADA SAMSARA MAMAKARARA HINGITU. Show all posts
Showing posts with label ಮಾಯದ ಸಂಸಾರ ಮಮಕಾರ ಹಿಂಗಿತು purandara vittala MAYADA SAMSARA MAMAKARARA HINGITU. Show all posts

Wednesday, 22 December 2021

ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು purandara vittala MAYADA SAMSARA MAMAKARARA HINGITU



RAGA PANTUVARALI  TALA ADI TISHRA JATI


ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು ||ಪ||

ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು ||ಅ.ಪ||

ಭಾವಿಸಿದ್ದೆಲ್ಲವು ಭೂಮಿಪಾಲಾದ ಮೇಲಿನ್ನೇನಿನ್ನೇನು
ಸೇವಿಸಿದ ಗಣಪ ಮಂಗನಾದ ಮೇಲಿನ್ನೇನಿನ್ನೇನು ||೧||

ಒತ್ತಿ ಹಿಡಿದ ಕಂಬ ವ್ಯರ್ಥವಾದ ಮೇಲಿನ್ನೇನಿನ್ನೇನು
ಜತ್ತಾದ ಜನರೆಲ್ಲ ಜರೆದು ಪೋದ ಮೇಲಿನ್ನೇನಿನ್ನೇನು ||೨||

ತೋಡಲು ಬಾವಿ ಬೇತಾಳ ಹೊರಟಿತು ಇನ್ನೇನಿನ್ನೇನು
ನಾಡ ಜನಕೆ ನಾಲ್ಕು ನಾಲಿಗುಂಟಾಯಿತು ಇನ್ನೇನಿನ್ನೇನು ||೩||

ಬರಹೋಗುವವರ ಮುಂದೆ ಮರಿಯಾದೆ ಹೋಯಿತು ಇನ್ನೇನಿನ್ನೇನು
ಸರಸ ಸಂಸಾರದ ಸವಿ ಹಾರಿಹೋಯಿತು ಇನ್ನೇನಿನ್ನೇನು ||೪||

ಕಯ್ಯಿಗೆ ಬಂದಪರಂಜಿ ಕಬ್ಬಿಣವಾಯಿತು ಇನ್ನೇನಿನ್ನೇನು
ಬಯಸಲೇತಕೆ ಪಡೆದ ಭಾಗ್ಯ ಬಯಲಾಯಿತು ಇನ್ನೇನಿನ್ನೇನು ||೫||

ಅರ್ಥಿಯ ಸಂಸಾರ ಅಡವಿಯ ಪಾಲಾದ ಮೇಲಿನ್ನೇನಿನ್ನೇನು
ಮಿತ್ರರಾದವರೆಲ್ಲ ಶತ್ರುಗಳಾದ ಮೇಲಿನ್ನೇನಿನ್ನೇನು ||೬||

ಗಂಡ(ಗಂಡು)ಮಕ್ಕಳು ಯಮಗಂಡರಾದ ಮೇಲಿನ್ನೇನಿನ್ನೇನು
ಪಂಡಿತ ಶ್ರೀ ಪುರಂದರವಿಠಲರಾಯ ಇನ್ನೇನಿನ್ನೇನು ||೭||
****

ರಾಗ: ಸೌರಾಷ್ಟ್ರ   ತಾಳ: ಝಂಪೆ  (AUDIO RAGA MAYBE DIFFERENT)

ಹರಿದಾಸರ ಸಂಗ ದೊರಕಿತು ಎನಗೀಗ ಇನ್ನೇನಿನ್ನೇನು
ವರಗುರು ಉಪದೇಶ ನೆರವಾಯ್ತು ಎನಗೆ ಇನ್ನೇನಿನ್ನೇನು ||ಪ||

ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನು
ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲೆಸಿತು ಇನ್ನೇನಿನ್ನೇನು ||

ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನು
ಜಲಜನಾಭನ ಧ್ಯಾನ ಹೃದಯದೊಳ್ ದೊರಕಿತು ಇನ್ನೇನಿನ್ನೇನು ||

ತಂದೆತಾಯಿ ಮುಚುಕುಂದ ವರದನಾದ ಇನ್ನೇನಿನ್ನೇನು
ಸಂದೇಹವಿಲ್ಲ ಮುಕುಂದ ದಯಮಾಡ್ದ ಇನ್ನೇನಿನ್ನೇನು ||

ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು
ಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು ||

ಎನ್ನ ವಂಶಗಳೆಲ್ಲ ಪಾವನವಾದವು ಇನ್ನೇನಿನ್ನೇನು
ಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು ||
****