..
kruti by ವರದೇಶ ವಿಠಲರು varadesha vittala dasaru
ಗುರುಜಗನ್ನಾಥದಾಸರಾಯರ ಸ್ತೋತ್ರ
ಗುರುವೆ ನೀನೊಲಿದು ಪಾಮರತರನಾದೆನ್ನ
ಹರುಷದಿ ಕರಪಿಡಿದು
ಪರಮ ಕರುಣದಿಂದ ಹರಿದಾಸ್ಯವಿತ್ತು ಉ -
ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ಪ
ವರದೇಂದ್ರಾರ್ಯರÀು ನಮ್ಮ ಶರಣನು ಇವನಿಗೆ
ಕರುಣಿಸೆಂದಾಜ್ಞಾಪಿಸೆ
ತರುಳನ ಶಿರದಲಿ ಕÀರವಿಟ್ಟು ಕೃಪೆಯಿಂದ
ಗುರುತು ತೋರಿದಕೆ ನಾ ಪರಮಧನ್ಯನೆಂಬೆ 1
ಮರುತಮತದತತ್ವ ಹರಿಕಥಾಮೃತಸಾರ
ವರರಹಸ್ಯಗಳೆಲ್ಲವ
ಸರಸವಾಗುತೆಂ ಅರಹುವೆವೆಂತೆಂಬ
ವರವಾಕ್ಯದಂತೆನ್ನ ಪರಿಪಾಲಿಪುದಯ್ಯ 2
ಹರಿಮುನಿದರು ಗುರುಕರುಣಿಪನೊಮ್ಮಿಗೆ
ಗುರು ಮುನಿಯೆ ಹರಿ ಪೊರೆಯ
ಹರಿಯ ಕೃಪೆಗೆ ಮುಖ್ಯ ಗುರುವೆ ಕಾರಣನೆಂದು
ನೆರೆನಂಬಿರಲು ನೀನರಿಯದಂತಿಪ್ಪುದೆ 3
ಮರುತ ಮತಾಬ್ಧಿಚಂದಿರ ಗುರುರಾಜರ
ವರಬಲದಿ ಮೆರೆವ
ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಸುವೆನಾ
ಹರಿವಲಿಯುವÀ ತೆರ ಕರುಣಿಸೆನ್ನಯನಿಜ4
ಬರಿದೆ ಬಾಹ್ಯಾಚಾರ ವಿರಚಿಸದಲೆ ಮನದಿ
ಹರಿರೂಪ ಕಾಂಬತೆರದಿ
ವರದೇಶ ವಿಠಲನ ಸಿರದಾಸ್ಯತನವೆಂಬ
ಗುರುತುತೋರುವುದಯ್ಯ ಗುರುಜಗನ್ನಾಥಾರ್ಯ 5
***