Showing posts with label ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸ karpara narahari. Show all posts
Showing posts with label ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸ karpara narahari. Show all posts

Monday, 2 August 2021

ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸ ankita karpara narahari

ತೂಗಿರೆ ಗುರುಗಳ ತೂಗಿರೆ ಯತಿಗಳ

ತೂಗಿರೆ ದಾಸಗ್ರೇಸರರ ನಾಗಶಯನನು

ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ಪ


ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ ಸು-

ನಾಮದಿ ಕರೆಸುವರ ತೂಗಿರೆ ಆ ಮುದತೀರ್ಥ

ಶಿಷ್ಯರೊಳು ಪದ್ಮನಾಭ ನಾಮದಿಂದಿರುವರ

ತೂಗಿರೆ1

ರಾಮನ ತಂದಿತ್ತ ನರಹರಿ ಮುನಿಪರ

ಮಾಧವ ತೀರ್ಥರ ತೂಗಿರೆ ಆಮ-

ಹಾವಿದ್ಯಾರಣ್ಯರನ ಗೆಲಿದಂಥ

ಶ್ರೀ ಮದಕ್ಷೋಭ್ಯರ ತೂಗಿರೆ 2

ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ

ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ

ತಟದಿ ಜಿತಾಮಿತ್ರರೆಂಬೊ ಪಿ-

ನಾಕಿ ಅಂಶಜರನ ತೂಗಿರೆ 3

ರಾಜರಂದದಿ ಸುಖಭೋಜನ ಕೃದ್ಯತಿ

ರಾಜ ಶ್ರೀಪಾದರ ತೂಗಿರೆ

ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ

ವ್ಯಾಸರಾಜರು ಮಲಗ್ಯಾರ ತೂಗಿರೆ 4

ವಾದಿಗಳನು ಯುಕ್ತಿವಾದದಿ ಗೆಲಿದಂಥ

ವಾದಿರಾಜರನ್ನ ತೂಗಿರೆ

ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ

ವೇದವ್ಯಾಸಾತ್ಮಜರ ತೂಗಿರೆ 5


ಪರಿಮಳ ರಚಿಸಿದ ವರಹಜ ತೀರಸ್ಥ

ಗುರು ರಾಘವೇಂದ್ರರ ತೂಗಿರೆ

ಇರುಳು ಕಾಲದಲಿ ತರಣಿಯ ತೋರಿದ

ಗುರುಸತ್ಯ ಬೋಧರ ತೂಗಿರೆ 6

ಪರಮತ ಖಂಡನ ನಿರುತದಿ ಮಾಡಿದ

ಗುರುವರದೇಂದ್ರರ ತೂಗಿರೆ

ಗುರು ಭುವನೇಂದ್ರರ ಕರಜವ್ಯಾಸತತ್ವ

ವರಿತ ಯತೀಶರ ತೂಗಿರೆ 7

ವರಭಾಗವತಸಾರ ಸರಸದಿ ರಚಿಸಿದ

ಗುರುವಿಷ್ಣು ತೀರ್ಥರ ತೂಗಿರೆ

ಪರಮ ಕ್ಷೇತ್ರಕೂಡಲಿಯೊಳಗಿರುವಂಥ

ಗುರುರಘುವೀರರ ತೂಗಿರೆ 8

ಹರಿಯ ಮಹಿಮೆಯನ್ನು ಸರಸದಿ ಪೇಳಿದ

ಪುರಂದರ ದಾಸರ ತೂಗಿರೆ

ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ

ಗುರು ವಿಜಯದಾಸರ ತೂಗಿರೆ 9

ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ

ಭಾಗಣ್ಣ ದಾಸರನ್ನು ತೂಗಿರೆ

ಘನ್ನ ಹರಿಯಗುಣ ವರ್ಣಿಸಿದಂಥ ಜ

ಗನ್ನಾಥ ದಾಸರ ತೂಗಿರೆ 10

ಮಾನವಿರಾಯರ ಪ್ರಾಣಪದಕರಾದ

ಪ್ರಾಣೇಶದಾಸರ ತೂಗಿರೆ

ವೇಣುಗೋಪಾಲನ್ನ ಗಾನದಿ ತುತಿಸಿದ

ಆನಂದದಾಸರ ತೂಗಿರೆ 11

ವಾಸ ಆದಿಶಿಲಾಧೀಶನ್ನ ಭಜಿಸಿದ

ಶೇಷ್ಠ ದಾಸರನ್ನ ತೂಗೀರೆ

ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ

ದಾಸೋತ್ತಮರನ್ನ ತೂಗೀರೆ 12

****