Showing posts with label ಆತನೆಯನ್ನ ತಾತನು ರಘುನಾಥನಾಗಿ ತ್ರೇತಾಯುಗದಲಿ sirigovinda vittala. Show all posts
Showing posts with label ಆತನೆಯನ್ನ ತಾತನು ರಘುನಾಥನಾಗಿ ತ್ರೇತಾಯುಗದಲಿ sirigovinda vittala. Show all posts

Monday, 2 August 2021

ಆತನೆಯನ್ನ ತಾತನು ರಘುನಾಥನಾಗಿ ತ್ರೇತಾಯುಗದಲಿ ankita sirigovinda vittala

by Askihala / Hasigyala GovindaDasaru 1873 -1915

by ಅಸ್ಕಿಹಳ / ಹಸಿಗ್ಯಾಳ ಗೋವಿಂದ ದಾಸರು 


ಆತ್ಮನಿವೇದನೆಯ ಕೀರ್ತನೆ

ಆತನೆಯನ್ನ ತಾತನು

ರಘುನಾಥನಾಗಿ ತ್ರೇತಾಯುಗದಲಿ

ಮೆರೆದಾತನೆಯನ್ನ ತಾತನು ಪ


ತಂದಿನ ಅಗಲಿದ ಕಂದ ಕಾನನದೊಳು

ಬಂದು ಅಂಗುಟ ಊರಿನಿಂದುತ್ವರಾ

ಇಂದಿರೇಶ ಭವಬಂಧ ಮೋಚಕ ಪೊರೆಯಂದೆನೆ

ಧೃವನಿಗೆ ಚಿರಪದವಿ ಕೊಟ್ಟಾತನೆಯನ್ನ ತಾತನು 1


ದುರುಳತನಪರಿಹರಿಸ ಬೇಕೆನೆ

ನರನರಸಿ ದ್ರೌಪದಿ ಮಾನವ ಪರಮಕರುಣಿ

ಮುರಹರನೆ ತಡಿಯದಲೆ ಪೊರೆಯನೆ

ತರುಣಿಯ ಮೊರೆ ಕೇಳಿದಂಥಾತನೆ 2


ಶಿರಿಗೋವಿಂದ ವಿಠಲ ವೇದ ವಂದಿತ

ಧರಣಿಜ ಪತಿ ಹರಿಪರನೆನ್ನುತ

ಪರಮ ಭಕುತಿಯಿಂದ ಸ್ಮರಿಸುವವರ

ಕರಪಿಡಿಯಲೋಸುಗ ತನ್ನ ಕರಚಾಚಿಕೊಂಡು ನಿಂತಾತನೆ 3

****