Showing posts with label ಪುಷ್ಕರಾದ್ರಿಯ ನೋಡಿ vijaya vittala suladi ವೇಂಕಟಗಿರಿ ಮಹಾತ್ಮೆ ಸುಳಾದಿ PUSHKARAADRIYA NODI VENKATAGIRI MAHATME SULADI. Show all posts
Showing posts with label ಪುಷ್ಕರಾದ್ರಿಯ ನೋಡಿ vijaya vittala suladi ವೇಂಕಟಗಿರಿ ಮಹಾತ್ಮೆ ಸುಳಾದಿ PUSHKARAADRIYA NODI VENKATAGIRI MAHATME SULADI. Show all posts

Sunday, 8 December 2019

ಪುಷ್ಕರಾದ್ರಿಯ ನೋಡಿ vijaya vittala suladi ವೇಂಕಟಗಿರಿ ಮಹಾತ್ಮೆ ಸುಳಾದಿ PUSHKARAADRIYA NODI VENKATAGIRI MAHATME SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ವೇಂಕಟಗಿರಿ ಮಹಾತ್ಮೆ ಸುಳಾದಿ 

 ರಾಗ ಮುಖಾರಿ 

 ಧ್ರುವತಾಳ 

ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿ 
ದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದು 
ನಿಷ್ಕಾಮ ವರವೆ ಉಂಟು ನಿತ್ಯಾ ಮುಕ್ತಿಗೆ ಗಂಟು 
ದುಷ್ಕಾಲಾ ನಿಮಗಿಲ್ಲ ದುರ್ಲಭವೆನಿಸಲ್ಲಾ 
ನಿಷ್ಕಂಟಕರಾಗಿ ನಿರಯ ಗೆದ್ದು ಚನ್ನಾಗಿ 
ಪುಷ್ಕರಾವಿಡಿದು ಸತ್ಪುಣ್ಯಾರ ಕ್ರಮ ತಿಳಿದು 
ಪುಷ್ಕರಾದಿ ಕ್ಷೇತ್ರ ಎಂಟರೊಳಗೆ ಇದು 
ಪುಷ್ಕರಾಜಾಪ್ತಾನಂತೆ ಧರೆಯೊಳುವೊಪ್ಪುತಿದೆ 
ಪುಷ್ಕರಾದಿ ದ್ವೀಪಾ ತಿರುಗಿದ ಫಲವು ನ - 
ಮಸ್ಕಾರ ವಂದೇ ಪ್ರದಕ್ಷಿಣೆಯಿಂದ ಇಂದೀವದು 
ಪುಷ್ಕರಾಕ್ಷಾ ತಿಮ್ಮಾ ವಿಜಯವಿಠಲ ಕುಡಿತಿ 
ಪುಷ್ಕರಾನಿಯಮತಿ ಪುಷ್ಕಳವಾಗಿ ಕೊಡುವಾ ॥ 1 ॥

 ಮಟ್ಟತಾಳ 

ಇದೇ ವಾರಣಾಸಿ ಉದಧಿ ಬಂಧನಾ 
ಇದೇ ದ್ವಾರಕಾಪುರಿ ಪದುಮನಾಭಾ 
ಇದೇ ಗಯಾ ಪ್ರಯಾಗಾ ಯದುಕುಲಪತಿ ಕ್ಷೇತ್ರಾ 
ಇದೇ ರಾಮನ ನಗರಿ ಮಧುರಾ ಗೋಕುಲ 
ಇದೇ ಕುಂಜರಗಿರಿ ಸದಮಲ ಕುರುಕ್ಷೇತ್ರ 
ಇದೇ ಮಾಯಾ ಪಡುವಲಾ ಉದಧಿ ತೀರದ ಪುರ
ಇದೇ ಸಕಲಕ್ಷೇತ್ರ ಇದೇ ನಿರ್ಮಳ ಯಾತ್ರಾ 
ಇದಕೆ ಅಧಿಕವಿಲ್ಲ ಇದಕೆ ಸಮಾನವಿಲ್ಲ 
ಇದೇ ನಿರ್ವಾಣಕೆ ಮೊದಲು ಸೋಪಾನವೂ 
ಇದರಿಂದಾದ ಫಲ ಒದಗವು ಮತ್ತೆಲ್ಲಿ 
ಪದುಮಗರ್ಭನಯ್ಯಾ ವಿಜಯವಿಠಲ ತಿಮ್ಮಾ 
ಹದುಳವ ಕೊಡುವನು ಪದೋಪದಿಗೆ ನೆನಿಸೆ ॥ 2 ॥

 ತ್ರಿವಿಡಿತಾಳ 

ಕೃತಯುಗದಲಿ ಇದೇ ವೈಕುಂಠವೆನಿಸೋದು 
ತ್ರೇತಾಯುಗದೊಳು ಅನಂತಾಸನ 
ಅತಿಶಯ ದ್ವಾಪರದಲ್ಲಿ ಶ್ವೇತದ್ವೀಪ 
ಚತುರಯುಗದಲ್ಲಿ ವರಗಿರಿಯೆ ಸಿದ್ಧ 
ಮತಿವಂತರು ಇನಿತು ತಿಳಿದು ಪೂಜಿಪರು ಭ - 
ರತಖಂಡಾದೊಳು ಏಕಾಭಕುತಿಯಲ್ಲಿ 
ಕ್ರತು ಜಪತಪ ತೀರ್ಥ ಯಾತ್ರಿ ದಾನಾ ನಾನಾ 
ವ್ರತಗಳು ತತ್ತದ್ವಿಚಾರಾದಲ್ಲಿ 
ಶತಕಲ್ಪಮಾಡಿ ಶ್ರೀಕೃಷ್ಣಗರ್ಪಿಸಿದವಗೆ 
ಹಿತವಾಗುವುದೊಮ್ಮೆ ಶೇಷಾದ್ರಿ ಯಾತ್ರಿ ದು -
ರ್ಮತಿಗಳಿಗಾದರು ನಿಷ್ಫಲವೂ
ಚತುರಮೊಗನು ಇದರ ಮಹಿಮೆಯೆಣಿಸಿ 
ಗತಿತಪ್ಪಿದವನಂತೆ ನಿಲ್ಲುವನು 
ಕ್ಷಿತಿಯ ಮಾನವರಿಗೆ ಸಾಧ್ಯವೆ ಎಣಿಸಾಲು 
ನುತಿಸಿ ಮಾತುರ ಪುಣ್ಯ ಪಡಕೊಂಬೋದು 
ಪತಿತಪಾವನ ತಿಮ್ಮ ವಿಜಯವಿಠ್ಠಲ ಇಲ್ಲಿ 
ಸತತ ನೆಲಸಿ ಇಪ್ಪ ತಿರುವೆಂಗಳೆನಿಸಿ ॥ 3 ॥

 ಅಟ್ಟತಾಳ 

ಗಿರಿಯ ಶೃಂಗಾರವ ವಿವರಿಸುವರಾರಿನ್ನು
ಮಿರುಗುತಿದೆ ಪುಟಾಯೆರದ ಬಣ್ಣದ ಚಾಮೀ - 
ಕರದಂತೆ ಸುತ್ತಲು ಚರಿಸುವ ಮೃಗ ಜಲ - 
ಚರ ಖಗತತಿ ವಿಸ್ತಾರವಾಗಿ ವೊಂದೊಂದು 
ಪರಿಪರಿ ವರ್ಣವು ತರುಗಿರಿ ಫಲ ಬಳ್ಳಿಭರಿತವಾಗಿಪ್ಪವು 
ಸರಸವಾಗಿದ್ದ ಹೊದರು ಗುಂಹ್ಯಾ ಒಳ್ಳೇ ಪು - 
ಷ್ಕರಣಿಗಳೆಲ್ಲಾ ಸುಂದರ ಶೃಂಗಗಳು ನೋಡೆ 
ಮೆರೆವುತಿದೆ ಸುರ ಗರುಡ ಗಂಧರ್ವ ಕಿ -
ನ್ನರ ಸಿದ್ಧ ಸಾಧ್ಯ ಕಿಂಪುರುಷ ಯಕ್ಷ ವಿದ್ಯಾ - 
ಧರ ಮನು ಮುನಿ ಭೂಸುರ ರಾಯರು ಎಲ್ಲ 
ಚರಿಸುತಿಪ್ಪರು ಈ ಪರ್ವತದೆಡೆಯಲ್ಲಿ 
ಪರಿಪರಿ ರೂಪವ ಧರಿಸಿಕೊಂಡು ಭಾ - 
ಸುರ ವಿರಕುತಿಯಲ್ಲಿ ಸರಿಗಾಣೆ ಇಲ್ಲಿದ್ದ
ನರಗೆ ಭುವನದೊಳು 
ಪರಿಪೂರ್ಣಗುಣಾಂಬುಧಿ ವಿಜಯವಿಠ್ಠಲ ತಿಮ್ಮಾ
ನಿರುತ ವೈಭವದಿಂದ ಹಿರಿದಾಗಿ ನಲಿವಾ ॥ 4 ॥

 ಆದಿತಾಳ 

ಅನಂತ ಜನುಮಕೊಮ್ಮೆ ಆನಂದಗಿರಿಯ ಯಾತ್ರಿ 
ಅನುಪೂರ್ವಕದಿಂದ ಮಾನವನು ಮಾಡಲು 
ಜ್ಞಾನವೆ ಕೊಡುವದು ಜ್ಞಾನಾದ್ರಿ ಇದು ಕಾಣೊ 
ಹೀನವಾಗಿದ್ದ ಪಾಪ ಕಾನನ ಸುಡುವದು 
ಶ್ರೀನಿವಾಸನೆ ಕೃಪೆ ತಾನೆ ಮಾಡಿ ಅವನ 
ಮಾಣದೆ ಪಾಲಿಸುವ ಈ ನಿಧಿಯಲಿ ಪಂ - 
ಚಾನನ ದೇವತೆಗಳು ಜ್ಞಾನಾದಿಯಿಂದ ಮದ್ಯ - 
ಪಾನಾದಿ ಪಾತಕವ ಹಾನಿಮಾಡಿಕೊಂಡು ನಿ - 
ಧಾನರಾಗಿ ಒಪ್ಪಿದರು ಏನೆಂಬೆನಯ್ಯಾ ಇದರ 
ವೇಣು ವಿಚಿತ್ರಕ್ಕೆ 
ಪ್ರಾಣನಾಯಕ ತಿಮ್ಮಾ ವಿಜಯವಿಠ್ಠಲ ಸದಾ 
ದಾನಿಗಳರಸನು ನೀಯನೆ ಸಾಕುವ ॥ 5 ॥

 ಜತೆ 

ಅಪ್ರತಿಯಾತ್ರೆ ಇದು ಕಂಡವರಿಗಾಗದು 
ಸ್ವಪ್ರಕಾಶ ವಿಜಯವಿಠ್ಠಲ ವೆಂಕಟಬಲ್ಲ ॥
***********