Showing posts with label ಬರುವುದೆಲ್ಲ ಬರಲಿ ಸಿರಿಹರಿಯ ಕರುಣ ವಿರಲಿ gopala vittala BARUVUDELLA BARALI SIRIHARIYA KARUNA VIRALI. Show all posts
Showing posts with label ಬರುವುದೆಲ್ಲ ಬರಲಿ ಸಿರಿಹರಿಯ ಕರುಣ ವಿರಲಿ gopala vittala BARUVUDELLA BARALI SIRIHARIYA KARUNA VIRALI. Show all posts

Saturday, 11 December 2021

ಬರುವುದೆಲ್ಲ ಬರಲಿ ಸಿರಿಹರಿಯ ಕರುಣ ವಿರಲಿ ankita gopala vittala BARUVUDELLA BARALI SIRIHARIYA KARUNA VIRALI



ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ||ಪ||

ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ||ಅ.ಪ||

ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿ
ಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿ
ವತನ ಕೆಡುವ ಪ್ರಯತ್ನವು ಬರಲಿ ||

ಅರಸು ಕರೆಸದಿರಲಿ ಸತಿ ಸರಸಸುರಿಸದಿರಲಿ
ನರಸಖನಿಗೆ ಭಾರ ಸಮರ್ಪಿಸಲಿ
ವಿರಸಮಾಡಿ ಮನೆ ಮುರಿಸುತ ಬರಲಿ ||

ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿ
ಜಾನಹೀನ ನೆಂದೆನುತ  ನಿಂದಿಸಲಿ
ಶ್ರೀನಿಧಿ ಗೋಪಾಲವಿಠಲ ಬೆರಿಲಿ ||
***

Baruvudella barali sirihariya karunavirali || pa ||
Gurugala charana saroruha madhurasa tara tara tapadi maimaretirali ||

Satiya matiyu kedali | suta ratipatitanaagi barali |
Joteyolidda hita pratikoolanaagali |
Vatana keduva prayatnavu barali || 1 ||

Arasu karesadirali sathi sarasasurisadirali |
Narasakhanige bhaara samarpisutali |
Virasa maadi mane murisuta barali || 2 ||

Maana maadadirali janarapamaana maadi nagali |
Jaanaheenanendenuta nindisali |
Shreenidhi gopaalavittalanu berili || 3 ||
***