ರಚನೆ: ಡಾ.ಸುಧಾಆದಿಶೇಷ
ಶ್ರೀ ಶ್ರೀ ಪದ್ಮನಾಭತೀರ್ಥ ಗುರು ನಮನ
ಪದ್ಮನಾಭಯತಿಗಳ ನಮಿಸು ಭಾವಿ
ಪದ್ಮಸಂಭವರ ಶಾಸ್ತ್ರಸಿಂಧು ತಿಮಿಂಗಿಲರ||ಪ||
ಪದ್ಮಜಪಿತನ ಕರುಣದಿ ಶೋಭನಭಟ್ಟರು
ಪದ್ಮಜ ಪಟ್ಟವೇರುವ ಮಧ್ವಮುನಿಮುಖ
ಪದ್ಮದಿ ಸಕಲ ಶಾಸ್ತ್ರಾರ್ಥವ ಕೇಳುತಲವರ
ಪದ್ಮಪಾದಕೆರಗಿ ಶಿಷ್ಯತ್ವವೈದಿದ ಶೇಷಾಂಶರಿವರು||೧||
ಪದ್ಮನಾಭರೆಂಬ ಶ್ರೇಷ್ಠ ಅಭಿದಾನಕೊಟ್ಟು ಗುರು
ಪದ್ಮಕರವ ಶಿರದಲಿಡಲು ಯತಿಪೀಠವೇರಿ
ಪದ್ಮಪತ್ರದೊಲು ನಿರ್ಲಿಪ್ತ ನಿರ್ಮಲಮನದಿ ಭಾವಿ
ಪದ್ಮಸಂಭವ ಗ್ರಂಥಾರ್ಥಗಳ ಭೋದಿಸಿದರು||೨||
ಪದ್ಮಜೆ ಸನ್ನಿಧ್ಯ ಬಲಮುರಿ ಶಂಖದಿ ಇಪ್ಪಂತೆ
ಪದ್ಮಿನಿ ಪ್ರಿಯ ಜ್ಞಾನಧನ ಮಧ್ವಶಾಸ್ತ್ರವಿದು
ಪದ್ಮನಾಭಯತಿ ಅದ ಸುನಿಶ್ಚಯದಿ ಪೇಳಿ
ಪದ್ಮಾಕಾಂತ ಶ್ರೀಹರಿ ಸರ್ವೋತ್ತಮತ್ಮ ಸಾರಿದರು||೩||
***