Showing posts with label ಶಂಕರ ನಾರಾಯಣ ಸಲಹೊ ಎನ್ನ ಪಂಕಜ ಪಾರ್ವತಿ ಪ್ರಿಯಾ vijaya vittala. Show all posts
Showing posts with label ಶಂಕರ ನಾರಾಯಣ ಸಲಹೊ ಎನ್ನ ಪಂಕಜ ಪಾರ್ವತಿ ಪ್ರಿಯಾ vijaya vittala. Show all posts

Thursday, 17 October 2019

ಶಂಕರ ನಾರಾಯಣ ಸಲಹೊ ಎನ್ನ ಪಂಕಜ ಪಾರ್ವತಿ ಪ್ರಿಯಾ ankita vijaya vittala

ವಿಜಯದಾಸ
rAgA: mukhAri/kApi. Adi tALA. 
.
ಶಂಕರನಾರಾಯಣ ಸಲಹೊ ಎನ್ನ |
ಪಂಕಜ ಪಾರ್ವತಿ ಪ್ರಿಯಾ | ಕಿಂಕರನ ಮೊರೆ ಕೇಳು ಪ

ಶಂಖ ಚಕ್ರಪಾಣಿ | ಮೃಗಾಂಕ ಮೌಳಿ ಅಹಿಪರಿ-|
ಯಂಕ ರುಂಡಮಾಲಾ ಶ್ರೀ | ವತ್ಸಾಂಕ ಭುಜಗಭೂಷಣ ವಿಷ್ಟು 1

ನಂದಿಗಮನ ಗರುಡಾರೂಢಾ | ಅಂದ ಭಸ್ಮಧರ ಕಸ್ತೂರಿ |
ಸಿಂಧು ವೈರಿ 2

ಪೀತಾಂಬರಧರ ಕೃತ್ಯವಾಸಾ | ಜಾತರಹಿತ ಜಾಹ್ನವಿಧರ | ವಿ-
ಧಾತ ಜನಕ ತ್ರಿಶೂಲಪಾಣಿ | ವಾತನೋಡಿಯ ಶಿವ ಗೋವಿಂದ 3

ಕೈಲಾಸವಾಸ ವೈಕುಂಠ | ಲೋಲ ಮಹಾಲಿಂಗ ರಂಗಾ |
ಜ್ವಾಲನೇತ್ರ ಕಮಲನಯನಾ | ಕಾಲಾ ನೀಲವರ್ಣ ಕಪರ್ವಿ 4

ರಾಜನೊಬ್ಬ ಭೃತ್ಯನೊಬ್ಬ | ಪೂಜ್ಯನೊಬ್ಬ ಮಾಳ್ಪನೊಬ್ಬ |
ಮೂಜ್ಜಗೇಶ ವಿಜಯವಿಠ್ಠಲ | ರಾಜ ತಾತ ಈಶ ಮೊಮ್ಮಗ 5
***

pallavi


1: shankaranArAyaNa sahahO enna pankaja pArvati priyA kinkarana mora kELu shankha
cakrapANi mrgAnkamauLi ahi pariyanka ruNDamAlA shrIvatsAnka bhujaga bhUSaNa viSNu

caraNam 2

nandi gamana garuDArUDhA anda bhasmadhara kastUri gandhalEpa bhUtanAtha sindhushayana tripuravairi

caraNam 3

pItAmbaradhara krtyavAsA jAta rahita jAhnavIdhara vidhAta janaka trishUlapANI vAtanoDeya shiva gOvinda

caraNam 4

kailAsavAsa vaikuNTha lOla mAhAlinga rangA jvAla nEtra kamala nayana kAlA nIlavarNa kapardi

caraNam 5

rAjanobba bhratyanobba pUjyanobba mALpanobba mUjagEsha vijataviThala rAjatAta Isha mommaga
***