writer ವಿದ್ಯಾಪ್ರಸನ್ನ ತೀರ್ಥರು
ಕವಳ ತಾಯಿ ಕವಳ ಅಮ್ಮ
ಪಾಪಿ ಪರದೇಶಿಯ ಮರಿಬೇಡಿರಮ್ಮ ।।ಪ।।
ಸಂಜೆಯ ಕವಳಕ್ಕೆ ಸಾವಿರ ಆಪತ್ತು
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ।।೧।।
ನಮದೊಂದು ಸಂಸಾರ ಬಲು ದೊಡ್ಡದವ್ವ
ಶ್ರಮಿಸುವರದರೊಳಗೊಬ್ಬರಿಲ್ಲವ್ವ
ಕಮಲವ್ವ ನಿಮ್ಮ ಅಮೃತಹಸ್ತದ ಕವಳ
ಎಮಗೊಂದು ಕ್ಷಣದಲಿ ಅಮೃತವಾಗೋದವ್ವ ।।೨।।
ಮಿತಿಯಿಲ್ಲದೈಶ್ವರ್ಯ ನಿಮಗಿಹುದೆಂದು
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು
ಅತುಲ ಮಹಿಮಾ ನಿಮ್ಮ ಪತಿಯ ಪ್ರಸಾದವ
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ ।।೩।।
*******
ರಾಗ : ಪೀಲು ತಾಳ : ಝಂಪೆ
ಕವಳತಾಯಿ ಕವಳ ಅಮ್ಮ ||ಪ||
ಪಾಪಿ ಪರದೇಶಿಯ ಮರೆಯ ಬೇಡಿರಮ್ಮ ||ಅ.ಪ||
ಸಂಜೆಯ ಕವಳಕ್ಕೆ ಸಾವಿರ ಆಪತ್ತು
ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ
ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ
ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||1||
ನಮದೊಂದು ಸಂಸಾರ ಬಲು ದೊಡ್ಡದವ್ವ
ಶ್ರಮಿಸುವರದರೊಳಗೊಬ್ಬರಿಲ್ಲವ್ವ
ಕಮಲವ್ವ ನಿಮ್ಮಯ ಅಮೃತಹಸ್ತದ ಕವಳ
ಎಮಗೊಂದು ಕ್ಷಣದಲಿ ಅಮೃತವಾಗೋದವ್ವ ||2||
ಮಿತಿಯಿಲ್ಲದೈಶ್ಚರ್ಯ ನಿಮಗಿಹುದೆಂದು
ಕ್ಷಿತಿಯೊಳು ಜ್ಞಾನಿಗಳಾಡುತಲಿಹರು
ಅತುಲ ಮಹಿಮ ನಿಮ್ಮ ಪತಿಯ ಪ್ರಸಾದವ
ಪ್ರತಿದಿನವಿತ್ತು ಪ್ರಸನ್ನರಾಗಿರವ್ವ ||3||
Kavaḷatāyi kavaḷa am’ma ||pa||
pāpi paradēśiya mareya bēḍiram’ma ||a.Pa||
san̄jeya kavaḷakke sāvira āpattu
an̄ji ōḍuvudendu kēḷillavēnam’ma
bhun̄jisi nim’maya patiya prasādada
en̄jalu enagiṣṭu jōḷigegikravva ||1||
namadondu sansāra balu doḍḍadavva
śramisuvaradaroḷagobbarillavva
kamalavva nim’maya amr̥tahastada kavaḷa
emagondu kṣaṇadali amr̥tavāgōdavva ||2||
mitiyilladaiścarya nimagihudendu
kṣitiyoḷu jñānigaḷāḍutaliharu
atula mahima nim’ma patiya prasādava
pratidinavittu prasannarāgiravva ||3||
******