ಕಂಡು ಧನ್ಯನಾದೆ
ನಂದ ತನಯನ ಕಣ್ಣಾರೆ ।
ಕಂಡು ಧನ್ಯನಾದೆ
ನಂದ ತನಯನ ।
ಕಂಡು ಧನ್ಯನಾದೆ ದಣಿ-
ಯವೆನ್ನವೆರಡು ಕಂಗಳೀಗ ।
ತಿರುಗಿ ಪೊಗಲಾರೆ
ತಿಮ್ಮಲಾಪುರೀಶ
ದೊರೆಯ ಬಿಟ್ಟು ।। ಚರಣ ।।
ಸಾಲು ದೀವಿಗೆ ಸಣ್ಣ ನಾಮ
ಸರದ ಮಧ್ಯೆ ವೈಜಯಂತೀ ।
ಸೂರ್ಯನಂತೆ ಪೊಳೆವ ಮುದ್ದು
ಮುಖವು ಮಹಾದ್ವಾರದಲ್ಲೇ ।। ಚರಣ ।।
ಶಂಖ ಚಕ್ರ ಶ್ಯಾಮ ವರ್ಣ
ಅಂಕಿತವುಳ್ಳ ನಾಮಗಳಿಂದ ।
ಪಂಕಜಾಕ್ಷ ಪರಮಪುರುಷ
ವೆಂಕಟನೆಂಬೊ
ನಾಮಾಂಕಿತನಾದವನ ।। ಚರಣ ।।
ಆ ಮಹಾ ವೈಕುಂಠದಲ್ಲಾ-
ವಾಸವಾದ ನಮ್ಮ । ಕುಲ ।
ಸ್ವಾಮಿ ಯೆನಿಸಿಕೊಂಡ
ಭೀಮೇಶಕೃಷ್ಣನ
ದಯದಿಂದೀಗ ।। ಚರಣ ।।
***
ರಾಗ : ಹಂಸಾನಂದೀ ತಾಳ : ಆದಿ (raga, taala may differ in audio)