Saturday 11 December 2021

ಕಂಡು ಧನ್ಯನಾದೆ ನಂದ ತನಯನ ಕಣ್ಣಾರೆ ankita bheemesha krishna KANDU DHANYANAADE NANDA TANAYANA KANNAARE



ಕಂಡು ಧನ್ಯನಾದೆ

ನಂದ ತನಯನ ಕಣ್ಣಾರೆ ।


ಕಂಡು ಧನ್ಯನಾದೆ

ನಂದ ತನಯನ ।

ಕಂಡು ಧನ್ಯನಾದೆ ದಣಿ-

ಯವೆನ್ನವೆರಡು ಕಂಗಳೀಗ ।

ತಿರುಗಿ ಪೊಗಲಾರೆ

ತಿಮ್ಮಲಾಪುರೀಶ

ದೊರೆಯ ಬಿಟ್ಟು ।। ಚರಣ ।।


ಸಾಲು ದೀವಿಗೆ ಸಣ್ಣ ನಾಮ

ಸರದ ಮಧ್ಯೆ ವೈಜಯಂತೀ ।

ಸೂರ್ಯನಂತೆ ಪೊಳೆವ ಮುದ್ದು

ಮುಖವು ಮಹಾದ್ವಾರದಲ್ಲೇ ।। ಚರಣ ।।


ಶಂಖ ಚಕ್ರ ಶ್ಯಾಮ ವರ್ಣ

ಅಂಕಿತವುಳ್ಳ ನಾಮಗಳಿಂದ ।

ಪಂಕಜಾಕ್ಷ ಪರಮಪುರುಷ

ವೆಂಕಟನೆಂಬೊ

ನಾಮಾಂಕಿತನಾದವನ ।। ಚರಣ ।।


ಆ ಮಹಾ ವೈಕುಂಠದಲ್ಲಾ-

ವಾಸವಾದ ನಮ್ಮ । ಕುಲ ।

ಸ್ವಾಮಿ ಯೆನಿಸಿಕೊಂಡ

ಭೀಮೇಶಕೃಷ್ಣನ

ದಯದಿಂದೀಗ ।। ಚರಣ ।।

***


 ರಾಗ : ಹಂಸಾನಂದೀ   ತಾಳ : ಆದಿ (raga, taala may differ in audio)


No comments:

Post a Comment