Saturday, 11 December 2021

ಹ್ಯಾಂಗೆ ಮೆಚ್ಚಿದೆ ಹೆಂಗಳರನ್ನೆ ಹಲವುರೂಪ ತಾಳಿದವನ ankita hayavadana HYAANGE MECHCHIDE HENGALARANNE HALAVU ROOPA TAALIDAVANA



ಹ್ಯಾಂಗೆ ಮೆಚ್ಚಿದೆ ಹೆಂಗಳರನ್ನೆ

ಹಲವುರೂಪ ತಾಳಿದವನ ಪ.


ರಾಗ ಮಿಗಿಲು ಲಕುಮಿರಮಣ

ಭೋಗಿರಾಜಶಯನನ ಅ.ಪ.

ಜಲದಿ ಚರಿಸುತಿಹನು ಸತತ

ಒಲಿದು ಶಿರವ ನೆಗಹಿ ನೋಡ

ಸಲೆವಿಕಾರ ಕೋರೆಹಲ್ಲ

ಚಲ ಮಹೋಗ್ರ ರೂಪನ

ನೆಲವನಳೆದು ತಾಯಿತಲೆಯ ತರಿದು ಕರಡಿ ಕಪಿಯೊಳಾಡಿ

ಒಲಿದು ಗೋವುಕಾಯ್ದು ಬತ್ತಲೆತೊಳಲಿ ತುರಗವೇರ್ದನ 1


ಸೊಗಡುಗಂಧವೆಸೆವ ತನುವು

ತೆಗೆದ ಬಾಯಿ ಕುಗ್ಗಿದ ಬೆನ್ನು

ಅಗೆದು ನೆಲವ ಬಗೆದು ರೌದ್ರ

ಹೊಗೆಯತೋರ್ವ ವದನನ

ವಿಗಡವಿಪ್ರ ರಾಜವೈರಿ ಬಗೆಯಬಡದಾರಣ್ಯವಾಸಿ

ನಗವ ಬೆರಳ ತುದಿಯಲೆತ್ತಿ ಜಗದ ಲಜ್ಜೆಯ ತೊರೆದ ಕಲ್ಕಿಯ 2


ಮಿಡಿದು ಹೊಳೆವ ಚಂಚಲಚಿತ್ತ

ಕಡುಕಠಿಣ ದೇಹದವನ

ಹಿಡಿದ ರೋಮಮಯ ಶರೀರ

ಕಿಡಿಯನುಗುಳ್ವ ನಯನನ

ಬಿಡದೆ ದಾನಬೇಡಿ ಕೊಡಲಿಪಿಡಿದು ಮೃಡನ ಧನುವ ಮುರಿದು

ಜಡಿದು ಅಗ್ರಪೂಜೆಗೊಂಡ ಕಡುನಿರ್ವಾಣ ಹಯವದನನ3


ಸಂಪ್ರದಾಯದ ಹಾಡುಗಳು

***







No comments:

Post a Comment