..
ಛೀ ಛೀ ಮನವೆ ನಾಚದ ತನುವೆನೀಚವೃತ್ತಿಯ ಬಿಟ್ಟುನೆನೆ ಕಂಡ್ಯ ಹರಿಯ ಪ.
ಕಿವಿಗೊಟ್ಟು ಗಂಟೆಯ ನಾದಕ್ಕೆ ಹುಲ್ಲೆಯನಿವಹ ಬಲೆಗೆ ಸಿಕ್ಕಿ ಬಿದ್ದುದನರಿಯನವ ಯೌವನೆಯರ ಕೋಕಿಲಾಲಾಪದಸವಿನುಡಿಗೇಳದಚ್ಯುತನ ಕಥೆ ಕೇಳೊ 1
ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದುಉಣ್ಣದುರಿವುದ ನೀ ಕಂಡು ಕಂಡರಿಯಬಣ್ಣದಬಲೆಯರ ರೂಪಿಗೆ ಮರುಳಾಗಿಮಣ್ಣ ತಿನ್ನದೆ ಮಾಧವನ್ನ ನೀ ಸ್ಮರಿಸೋ 2
ಗಾಣದ ತುದಿಯ ಮಾಂಸವ ಮೆಲ್ಲುವ ಮತ್ಸ್ಯಪ್ರಾಣವ ಬಿಡುವುದಂಗನೆಯರಧರವಮಾಣದೆ ಬಯಸಿ ಕೆಡದೆ ಶ್ರೀಮನ್ನಾರಾ-ಯಣ ನಾಮಾಮೃತಸವಿ ಎಲೆ ಮನವೆ 3
ಅಳಿಯೆದ್ದು ಕರಿ ಕರಿಣಿಯ ಸ್ಪರುಶಕೆ ಪೋಗಿಕುಳಿಯ ಬಿದ್ದುದ ನೀ ಕಂಡು ಕಂಡರಿಯಲಲನೆಯರಾಲಿಂಗನಕೆÀಳೆಸದೆ ಸಿರಿ-ಲಲನೇಶನಂಘ್ರಿಯ ಅಪ್ಪಿಕೋ ಮನವೆ 4
ಅಳಿ ಪರಿಮಳಕ್ಕಾಗಿ ನಳಿನದೊಳಗೆ ಸಿಕ್ಕಿಅಳಿವಂತಂಗನೆಯ ಮೈಗಂಧವ ಬಯಸಿಬಳಲದೆ ವರದ ಶ್ರೀಕೃಷ್ಣನಂಘ್ರಿಯೊಳಿಪ್ಪತುಳಸಿಯನಾಘ್ರಾಣಿಸು ಕಂಡ್ಯಮನವೆ 5
***