Showing posts with label ಧನ್ಯನಾದೆ ಧನ್ಯನಾದೆ ಘನ್ನ ಲಕುಮಿಯ ಪಾದ ನೋಡಿದೆ gadugina veeranarayana. Show all posts
Showing posts with label ಧನ್ಯನಾದೆ ಧನ್ಯನಾದೆ ಘನ್ನ ಲಕುಮಿಯ ಪಾದ ನೋಡಿದೆ gadugina veeranarayana. Show all posts

Wednesday, 1 September 2021

ಧನ್ಯನಾದೆ ಧನ್ಯನಾದೆ ಘನ್ನ ಲಕುಮಿಯ ಪಾದ ನೋಡಿದೆ ankita gadugina veeranarayana

..

kruti by ವೀರನಾರಾಯಣ Veeranarayana 


ಧನ್ಯನಾದೆ ಧನ್ಯನಾದೆ ಘನ್ನ ಲಕುಮಿಯ ಪಾದ ನೋಡಿದೆ ಪ


ಚೆನ್ನದೇವಿಯ ಪಾದಕೆರಗಿದೆ ಮನ್ನಿಸೆಂತೆಂದವಳ ಬೇಡಿದೆ ಅ.ಪ.


ಚರಣ ಯುಗಳಲಿ ಮೆರೆವ ನೂಪುರಧರಿಸಿ ಪೀಠದೊಳಿಂದಿರೆಜರದ ಶೀರೆಯನುಟ್ಟು ನಡುವೊಳುಹಿರಿದು ಒಡ್ಯಾಣದೊಳು ನಿಂದಿರೆ 1


ಕರದ ಕಂಕಣ ಕೊರಳ ಹಾರವುವರ ಕಿರೀಟವು ಶಿರದೊಳಿಂದಿರೆಕರಣ ಕುಂಡಲ ಮೂಗು ಮುಕುರವುಪರಮ ತೇಜದ ಸೊಬಗ ತಂದಿರೆ 2


ಹೊಳೆವ ಕಂಗಳು ಹಣೆಯ ಕುಂಕುಮಥಳಿಸೆ ಸರಸಿಜ ಮಂದಿರೆಬಿಳಿಯ ಕೊಡೆಯನು ಹಿಡಿವ ತೆರದಲಿಎಳೆಯ ನಾಗವು ಹಿಂದಿರೆ 3


ಬೆರಳೊಳುಂಗುರ ಕುರುಳು ಸುಂದರಹೆರಳು ಸಿಂಗರದಿಂದಿರೆತಿರುಳು ಗಂಧದ ಸರಳ ಮೂರ್ತಿಯತರಳೆ ಎನ್ನಾಯ ಮುಂದಿರೆ 4


ಧೀರ ಭಕುತರ ಪೊರೆವುದಕೆ ಕರವೀರ ಪುರದೊಳು ಬಂದಿರೆಧಾರುಣೀಯೊಳು ಮೆರೆವ ಗದುಗಿನವೀರನಾರಾಯಣನ ಚಂದಿರೆ5

***