Showing posts with label ಜಯ ಜಯತು ಹನುಮಂತ ಪವಿತ ಸಿಖ prasannavenkata JAYA JAYATU HANUMANTA PAVITA SIKHA. Show all posts
Showing posts with label ಜಯ ಜಯತು ಹನುಮಂತ ಪವಿತ ಸಿಖ prasannavenkata JAYA JAYATU HANUMANTA PAVITA SIKHA. Show all posts

Tuesday, 5 October 2021

ಜಯ ಜಯತು ಹನುಮಂತ ಪವಿತ ಸಿಖ ankita prasannavenkata JAYA JAYATU HANUMANTA PAVITA SIKHA



by ಪ್ರಸನ್ನವೆಂಕಟದಾಸರು
ಜಯ ಜಯತು ಹನುಮಂತ ಪವಿತ ಸಿಖ ಸಹಜಾತ
ಜಯತು ಕಪಿರಾಜ ಯುವರಾಜ ಯತಿರಾಜ ಜಯತು ||ಪ.||

ಸುರರಿಗುತ್ತಮ ಜಗದಾಭರಣ ಶಿರೋಮಣಿ ಜಯತು
ಪರಮ ಅದ್ಭುತಚರಿತ ಸುವಟು ಜಯತು
ಧರಜೆಶೋಧಕ ನಿಶಾಚರಪುರದಹಕ ಜಯತು
ಜಯತು ವೈರಾಗಿ ಮಹಭೋಗಿ ಶುಭಯೋಗಿ ಜಯತು ||1||

ಸುರರಿಪುಮಥನ ರಾಮಕಾರ್ಯಧುರಂಧರ ಜಯತು
ಚಿರಪ್ಲವಗ ಭವರೋಗಭೇಷಜ ಜಯತು
ಕರಿರಕರ್ಣ ದಶಮುಖಾಂಗ ಗಿರಿವರಕುಲಿಶ ಜಯತು
ಜಯತು ಅಕ್ಷಹರ್ತಾ ಕ್ರತುಕರ್ತ ಸುಖತೀರ್ಥ ಜಯತು ||2||

ತ್ರಿಕೋಟಿ ಪವನಾಖ್ಯರೂಪ ಪ್ರಕಟಾಪ್ರಕಟ ಜಯತು
ಅಕಳಂಕಾಮಿತರೂಪ ಮುಖ್ಯೇಶ ಜಯತು
ಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತು
ಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು ||3||
****

ಜಯ ಜಯತು ಹನುಮಂತ ಪವಿತ ಸಿಖ ಸಹಜಾತಜಯತು ಕಪಿರಾಜ ಯುವರಾಜ ಯತಿರಾಜ ಜಯತು ಪ.

ಸುರರಿಗುತ್ತಮ ಜಗದಾಭರಣ ಶಿರೋಮಣಿ ಜಯತುಪರಮಅದ್ಭುತಚರಿತ ಸುವಟು ಜಯತುಧರಜೆಶೋಧಕ ನಿಶಾಚರಪುರದಹಕ ಜಯತುಜಯತು ವೈರಾಗಿ ಮಹಭೋಗಿ ಶುಭಯೋಗಿ ಜಯತು 1

ಸುರರಿಪುಮಥÀನ ರಾಮಕಾರ್ಯಧುರಂಧರ ಜಯತುಚಿರಪ್ಲವಗ ಭವರೋಗಭೇಷಜ ಜಯತುಕರಿರಕರ್ಣ ದಶಮುಖಾಂಗ ಗಿರಿವರಕುಲಿಶ ಜಯತುಜಯತು ಅಕ್ಷಹರ್ತಾ ಕ್ರತುಕರ್ತಸುಖತೀರ್ಥಜಯತು2

ತ್ರಿಕೋಟಿ ಪವನಾಖ್ಯರೂಪ ಪ್ರಕಟಾಪ್ರಕಟ ಜಯತುಅಕಳಂಕಾಮಿತರೂಪ ಮುಖ್ಯೇಶ ಜಯತುಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತುಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು 3
****