ನಲ್ಲೆಯರು ನಮೋ ಎಂಬೆವು ಸುರರಎಲ್ಲರ ಬಲಗೊಂಬೆವು ಪ.
ಚಲ್ವೆ ಕಂಗಳೆಯರಿಗೆ ಹೊಲ್ಲವು ಎನುತಿರೆಹೊಲ್ಲ ತನವೆಲ್ಲ ಹೊರಗ್ಹಾಕಿ ಬಾಹೊಅ.ಪ.
ಜಗದುದರನ ನಾವು ಹೆಗಲಲ್ಲಿ ಧರಿಸುತ ಅಗಣಿತ ಮಹಿಮ ಹೌದೆಂದುಅಗಣಿತ ಮಹಿಮಎನುತಿರೆಮಗನ ಮುಂದಾಗಿ ಬಲಗೊಂಬೆ1
ಸಾಗರಶಯನಗೆ ಆಗುವ ಹಾಸಿಗೆ ಬ್ಯಾಗನೆ ವರವ ಕೊಡುವೋನುಬ್ಯಾಗನೆ ವರವ ಕೊಡುವ ನಾಗೇಂದ್ರನಮೋ ಎಂಬÉ ನಮ್ಮ ಗೆಲಿಸೆಂದು 2
ನಂದಿವಾಹನ ಶಿವನ ಮುಂದಾಗಿ ಬಲಗೊಂಬೆ ಇಂದಿಗೆ ಪಂಥಗೆಲಿಸೆಂದುಇಂದಿಗೆ ಪಂಥಗೆಲಿಸೆಂದು ಬ್ರಹ್ಮನ ಕಂದನ ಮೊದಲೆ ಬಲಗೊಂಬೆ 3
ಸೌಪರ್ಣವಾರುಣಿ ಅಪರ್ಣ ದೇವಿಯರು ಸೌಕರ್ಯದಿಂದ ನಮ್ಮ ಪಂಥಸೌಕರ್ಯದಿಂದ ನಮ್ಮ ಪಂಥಗೆಲಿಸೆಂದುಕರವ ಮುಗಿವೆವು ಕ್ಷಣಕ್ಕೊಮ್ಮೆ 4
ಇಂದ್ರ ಕುಮಾರನ ನಾವು ಮುಂದಾಗಿ ಬಲಗೊಂಡುಇಂದು ರಾಮೇಶನನುಗಾಲ ಇಂದು ರಾಮೇಶನನುಗಾಲ ನೆನೆಯುತ ಮುಂದಕ್ಕೆ ಹೆಜ್ಜೆನಿಡುವೋಣ5
***