Showing posts with label ಅಷ್ಟ ದಿಕ್ಕಿನಲಿಪ್ಪ ಅಸುರರ ಅಸುವ ಕೊಳ್ಳುವೆನೆಂದು varadakrishna. Show all posts
Showing posts with label ಅಷ್ಟ ದಿಕ್ಕಿನಲಿಪ್ಪ ಅಸುರರ ಅಸುವ ಕೊಳ್ಳುವೆನೆಂದು varadakrishna. Show all posts

Wednesday, 22 September 2021

ಅಷ್ಟ ದಿಕ್ಕಿನಲಿಪ್ಪ ಅಸುರರ ಅಸುವ ಕೊಳ್ಳುವೆನೆಂದು ankita varadakrishna

ಶ್ರೀಕೃಷ್ಣಾವತಾರವನ್ನು ಅದ್ಭುತವಾದ ರೀತಿಯಲ್ಲಿ ವರ್ಣಿಸಿದ್ದಾರೆ ,"ವರದ ಕೃಷ್ಣ" ಅಂಕಿತರಾದ ಶ್ರೀ ಗುರುನಾಥ ದೇಶಪಾಂಡೆಯವರು. ಓದಿ ಆನಂದಿಸಿರಿ.



ಅಷ್ಟ ದಿಕ್ಕಿನಲಿಪ್ಪ ಅಸುರರ

ಅಸುವ ಕೊಳ್ಳುವೆನೆಂದು ಸೂಚಿಸೆ 

ಅಷ್ಟಮಿಯ ದಿನದಲ್ಲಿ ಶ್ರಾವಣ ಕೃಷ್ಣ ಪಕ್ಷದಲಿ  |

ಕೃಷ್ಣಪೀತಾಂಬರಾಯುಧದಿ ವಿ

ಶಿಷ್ಟನಾಗುತ ಪ್ರಕಟ ಗೊಂಡನು

ನಿಶಿಚರರುಗಳ ಹಣಿಯಲೋಸುಗ ನಿಶೀಥ ಸಮಯದಲ್ಲಿ||


ನಳಿನ ನಯನನ ಚಲ್ವ ನಾಸಿಕ ನೀಲ ಮೇಘ ಶ್ಯಾಮ ವರ್ಣನ

ಪೊಳೆವ ಪಲ್ಗಳ ಪಂಕ್ತಿ ಲೊಪ್ಪುವ ಬಾಲ ಕೃಷ್ಣನನು|

 ಸುಳಿಯ ನಾಭಿಯ ಶಂಖ ಕೊರಳನ

ಕುಳಿಯ ಗಲ್ಲಗಳಿಂದ ಶೋಭಿತ

ಹಲಧರನನುಜನ ಕಂಡು ಹರ್ಷಿತರಾದರಾಕ್ಷಣದಿ||


ನೋಡಿದರು ಮಾಧವನ ಎದುರಲಿ

ಮಾಡಿದರು ಪರಿಪರಿಯ ಸ್ತುತಿಗಳ

ಹಾಡಿ ಹೊಗಳಿದರವನ ಅದ್ಭುತ ವಾದ ಮಹಿಮೆಗಳ||

ಗಾಡಿಕಾರನು ಈರ್ವರಿಗು ತಾ

ನೀಡಿ ಪೂರ್ವ ರಹಸ್ಯ ಕೃತಿಯನು

ಪಡೆದ ಶಿಶುವಿನ ರೂಪ ಕೂಡಲೆ ಅವರ ಸಮ್ಮುಖದಿ||

***