ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತೆಂದೆನಬ್ಯಾಡಿ ಪ
ಎಲ್ಲಿ ನೋಡಿದರೆ ತಾ ಅಲ್ಲಿಗಲ್ಲಿಗಿಹ್ಯ ಎಲ್ಲ ಕಡೆಯಲ್ಲೇಕೋಮಯವೊ ಸುಲ್ಲಭವಾಗಿಹ್ಯಬಲ್ಲ ಜ್ಞಾನಿಗೆ ಭಾಸುತಿಹ್ಯ ಫುಲ್ಲಲೋಚನ ಪ್ರಾಣದೊಲ್ಲಭನು 1
ಎತ್ತ ನೋಡಿದರತ್ತ ಸುತ್ತಸುತ್ತಲಿಹ್ಯ ನಿತ್ಯವಾಗಿಹ್ಯ ಹೃತ್ಕಮಲದಲಿ ತುತ್ತಾಯಿತ ತಾ ಮಾಡಿ ನಿತ್ಯಸಲಹುವ ಹತ್ತಿಲೆ ಹೊಳೆಯುತ ಚಿತ್ತದಲಿ 2
ಹಿಂದೆನೋಡಿದಿರಿಹ ಮುಂದೇನೋಡಿದಿರಿಹ್ಯ ಸಂಧಿಸಿಹನು ಅಂತರಾತ್ಮದಲಿ ತಂದೆ ತಾಯಿಯು ಬಳಗಾಗಿಹ್ಯ ತಾನೆ ಎಂದಿಗೆ ಅಗಲದೆ ಅನುದಿನದಲಿ 3
ಜನವನದೊಳಗಿಹ್ಯ ಜನಾರ್ಧನ ತಾನು ತನುಮನದೊಳು ಥಳಥಳಸುತಲಿ ಅನುಮಾನವಿಲ್ಲದೆ ಅನಿಮಿಷದಲಿ ನೋಡಿ ಆಣುರೇಣುದಲಿ ಪರಿಪೂರ್ಣನು 4
ಸಾರಿಚಲ್ಲೆದ ಪರಬ್ರಹ್ಮಸ್ವರೂಪವಿದು ಸೂರ್ಯಾಡಬಹುದು ಸುಜ್ಞಾನಿಗಳು ತೋರದು ಎಂದಿಗೆ ಗುರುಕೃಪೆಯಿಲ್ಲದೆ ತರಳಮಹಿಪತಿ ವಸ್ತುಮಯವಿದು 5
****