Showing posts with label ಏಳಿ ಮೊಸರ ಕಡೆಯಿರೇಳಿ ಗೋಪಾಲ ಚೂಡಾಮಣಿ purandara vittala ELI MOSARA KADEYIRELI GOPALA CHOODAAMANI. Show all posts
Showing posts with label ಏಳಿ ಮೊಸರ ಕಡೆಯಿರೇಳಿ ಗೋಪಾಲ ಚೂಡಾಮಣಿ purandara vittala ELI MOSARA KADEYIRELI GOPALA CHOODAAMANI. Show all posts

Saturday, 4 December 2021

ಏಳಿ ಮೊಸರ ಕಡೆಯಿರೇಳಿ ಗೋಪಾಲ ಚೂಡಾಮಣಿ purandara vittala ELI MOSARA KADEYIRELI GOPALA CHOODAAMANI



ಪುರಂದರದಾಸರು
.ಏಳಿ ಮೊಸರ ಕಡೆಯಿರಿ ಏಳಿ
ಗೋಪಾಲ ಚೂಡಾಮಣಿ ಏಳದ ಮುನ್ನ ||ಪ||

ಇಂದುಮುಖಿಯರೆದ್ದು ಮುಖವನೆ ತೊಳೆದು 
ಶ್ರೀಗಂಧ ಕಸ್ತೂರಿ ಕುಂಕುಮಗಳಿಟ್ಟು 
ಚಂದ್ರಗಾವಿಯ ಸೀರೆಯ ನೀರಿವಿಟ್ಟು 
ಮುಕುಂದನ ಪಾಡುತ ಚದುರೆಯರೆಲ್ಲ ||೧||

ಹೊಂಗೊಡ ಬೆಳಗಿಟ್ಟು ಪೊಸ ಮೊಸರನೆ ತುಂಬಿ
ರಂಗನೀಲದ ಕಡೆಗೋಲನಿಟ್ಟು 
ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು
ರಂಗನ ಪಾಡುತ ಚದುರೆಯರೆಲ್ಲ ||೨||

ಬಡನಡು ಬಳುಕುತ ಕುಚಗಳಲ್ಲಾಡುತ 
ಕಡಗ ಕಂಕಣ ಝಣಝಣರೆನ್ನುತ 
ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ 
ಪಾಲ್ಗಡಲೊಡೆಯನ ಪಾಡುತ ಚದುರೆಯರು ||೩||

ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ 
ಹಸಿದು ಆಕಳಿಸಿ ಬಾಯಾರುತಲಿ 
ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ 
ಶಶಿವದನನಿಗೆ ಬೆಣ್ಣೆಯ ನೀಡಲೋಸುಗ ||೪||

ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು 
ಪ್ರಾಣಪದಕ ಕೃಷ್ಣನಿಗೆ ಕೊಡಲು 
ಚಾಣೂರ ಮಲ್ಲನ ಗೆಲಿದು ಬಾರೆನುತಲಿ 
ಜಾಣ ರಂಗಯ್ಯನಪ್ಪಲುಗೋಪಿ ||೫||

ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ 
ತಟ್ಟೆಯೊಳಾರತಿಗಳ ಬೆಳಗಿ 
ಥಟ್ಟನೆ ಉಪ್ಪು ಬೇವುಗಳನಿವಾಳಿಸಿ
ತೊಟ್ಟಿಲೊಳಿಟ್ಟು ಮುದ್ದಾಡುವಳೊ ||೬||

ನಮ್ಮಪ್ಪ ರಂಗಯ್ಯ ಅಳಬೇಡವೊ 
ದೊಡ್ಡ ಗುಮ್ಮ ಬಂದಿದೆ ಸುಮ್ಮನಿರು ಎನುತ 
ಅಮ್ಮಿಯನೀಯುತ ಅಮರರನಾಳ್ದನ 
ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ ||೭||

ಏಸೊ ಬೊಮ್ಮಾಂಡವ ರೋಮದೊಳಿರಿಸಿದ 
ವಾಸುದೇವನನೆತ್ತಿ ಕೊಂಬುವಳೊ 
ನಾಶರಹಿತನ ಆಯುಷ್ಯ ಹೆಚ್ಚಲೆಂದು 
ರಾಶಿದೈವಕೆ ತಾ ಬೇಡಿಕೊಂಬುವಳೊ ||೮||

ಮಾಧವ ಬಾ ಮಧುಸೂದನ ಬಾ 
ಬ್ರಹ್ಮಾದಿವಂದಿತ ಹರಿ ಬಾ ಯೆನುತ 
ಆದಿ ಮೂರುತಿ ಶ್ರೀ ಪುರಂದರವಿಠಲನ 
ಆದರದಲಿ ಮುದ್ದಾಡುವಳೊ ||೯||
***

Eli mosara kadeyiri eli
gopala chudamani elada munna ||pa||

Indumukhiyareddu mukhavane toledu 
srigandha kasturi kunkumagalittu 
chandragaviya sireya nirivittu 
mukundana paduta chadureyarella ||1||

Hongoda belagittu posa mosarane tumbi
ranganilada kadegolanittu 
shrungaravada reshimeya nenane hididu
rangana paduta chadureyarella ||2||

Badanadu balukuta kuchagalalladuta 
kadaga kankana jhana jhanarennuta 
mudida mallige huvu edabalakudure 
palgadalodeyana paduta chadureyaru ||3||

Husiniddeyali srikrishnanu malagire 
hasidu akalisi bayarutali 
musukinoliddu benneya bedutalire 
shashivadananige benneya nidalosuga ||4||

Enankamukhiyaru hosa benneyanu tegedu 
pranapadaka krishnanige kodalu 
chanura mallana gelidu barenutali 
jana rangayyanappalugopi ||5||

Drustiyu tagitendittu angarava 
tatteyolaratigala belagi 
thaṭṭane uppu bevugala nivalisi
tottilolittu muddaduvalo ||6||

Nammappa rangayya alabedavo 
dodda gumma bandide summaniru enuta 
ammiyaniyuta amararanaldana 
rammisi rammisi muddaduvalo ||7||

Eso bommandava romadolirisida 
vasudevananetti kombuvalo 
nasharahitana ayushya hechchalendu 
rashidaivake ta bedikombuvalo ||8||

Madhava ba madhusudana ba 
brahmadivandita hari ba yenuta 
adi muruti sri purandaravittalana 
adaradali muddaduvalo ||9||
***

pallavi

Eli mosara kaDeyirELi gOpAla cUDAmaNi Elada munna

caraNam 1

indumukhiyareddu mukhavane toLedu shrIgandha kastUri kumkumagaLiTTu
candra kAviya sIreya nIriviTTu mukundana pADuta catureyarella

caraNam 2

hongoDa beLagiTTu posa mosarane tumbi ranganIlada kaDegOlaniTTu
srngAravAda rEsimeya nENane hiDidu rangana pADuta catureyarella

caraNam 3

paDanaDu baLukuta kucagaLallADuta kaDaga kankaNa jhaNa jhaNarennuta
muDida mallige huvu eDabalakudure pAlgaDaloDeyana pADuta catureyore

caraNam 4

husiniddeyali shrI krSNanu malagire hasidu AkaLisi bAyArutali
musuginoLiddu beNNeya bEDutalire shashi vadanige beNNeya nIDalOsuga

caraNam 5

ENAnga mukhiyaru hosa beNeyanu tegedu prANa padaka krSNanige koDalu
cANUra mallana gelidu bArenutali jANa purandara viTTalanappalu gOpi
***


ಏಳಿ ಮೊಸರ ಕಡೆಯಿರೇಳಿ-ಗೋ-|ಪಾಲ ಚೂಡಾಮಣಿ ಏಳದ ಮುನ್ನ ಪ

ಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-|ಗಂಧ-ಕಸ್ತೂರಿ-ಕುಂಕುಮಗಳಿಟ್ಟು ||ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-|ಕುಂದನ ಪಾಡುತ ಚದುರೆಯರೆಲ್ಲ 1

ಹೊಂಗೊಡ ಬೆಳಗಿಟ್ಟು ಪೊಸಮೊಸರನೆತುಂಬಿ|ರಂಗನೀಲದ ಕಡೆಗೋಲನಿಟ್ಟು ||ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು |ರಂಗನ ಪಾಡುತ ಚದುರೆಯರೆಲ್ಲ 2

ಬಡನಡು ಬಳುಕುತ ಕುಚಗಳಲ್ಲಾಡುತ |ಕಡಗ-ಕಂಕಣ ಝಣಝಣರೆನ್ನುತ ||ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-|ಲ್ಗಡಲೊಡೆಯನ ಪಾಡುತ ಚದುರೆಯರು 3

ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ |ಹಸಿದು ಆಕಳಿಸಿ ಬಾಯಾರುತಲಿ ||ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ |ಶಶಿವದನನಿಗೆ ಬೆಣ್ಣೆಯ ನೀಡಲೋಸುಗ 4

ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು |ಪ್ರಾಣಪದಕ ಕೃಷ್ಣನಿಗೆ ಕೊಡಲು ||ಚಾಣೂರ ಮಲ್ಲನ ಗೆಲಿದು ಬಾರೆನುತಲಿ ||ಜಾಣ ಪುರಂದರವಿಠಲನಪ್ಪಲುಗೋಪಿ5

ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ |ತಟ್ಟೆಯೊಳಾರತಿಗಳ ಬೆಳಗಿ ||ಥಟ್ಟನೆ ಉಪ್ಪು-ಬೇವುಗಳನಿವಾಳಿಸಿ|ತೊಟ್ಟಿಲೊಳಿಟ್ಟು ಮುದ್ದಾಡುವಳೊ 6

ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ |ಗುಮ್ಮ ಬಂದಿದೆ ಸುಮ್ಮನಿರು ಎನುತ ||ಅಮ್ಮಿಯನೀಯುತ ಅಮರರನಾಳ್ದನ |ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ 7

ಏಸೊ ಬೊಮ್ಮಾಂಡವ ರೋಮದೊಳಿರಿಸಿದ |ವಾಸುದೇವನನೆತ್ತಿ ಕೊಂಬುವಳೊ ||ನಾಶರಹಿತನಾಯುಷ್ಯ ಹೆಚ್ಚಲೆಂದು |ರಾಶಿದೈವಕೆ ತಾ ಬೇಡಿಕೊಂಬುವಳೊ 8

ಮಾಧವಬಾ ಮದುಸೂದನ ಬಾ ಬ್ರ-|ಹ್ಮಾದಿವಂದಿತಹರಿಬಾ ಯೆನುತ ||ಆದಿ ಮೂರುತಿ ಶ್ರೀ ಪುರಂದರವಿಠಲನ |ಆದರದಲಿ ಮುದ್ದಾಡುವಳೊ 9
***