Showing posts with label ತ್ರಾತ ಹರಿ ಪದ್ಮಜರ ಅನುಗ್ರಹ ನಿಯಮನದಿ prasannashreenivasa. Show all posts
Showing posts with label ತ್ರಾತ ಹರಿ ಪದ್ಮಜರ ಅನುಗ್ರಹ ನಿಯಮನದಿ prasannashreenivasa. Show all posts

Thursday, 5 August 2021

ತ್ರಾತ ಹರಿ ಪದ್ಮಜರ ಅನುಗ್ರಹ ನಿಯಮನದಿ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಕೇತುದೇವ ಸ್ತೋತ್ರ


ತ್ರಾತ ಹರಿ ಪದ್ಮಜರ ಅನುಗ್ರಹ ನಿಯಮನದಿ

ಕೇತುಗಳ ದೇವನೇ ಕೇತುವೇ ನಮಸ್ತೇ ಪ


ಕರಾಳ ದ್ಯುತಿ ಸಂಕಾಶ ರೌದ್ರನೇ ನಮೋ

ಘೋರ ಪಾಪ ಕಷ್ಟಂಗಳ ದೂರಮಾಡಿ ಸಲಹೆನ್ನ 1


ಅನೇಕರೂಪ ವರ್ಣಾಶ್ಚ ಶತಶೋಥ ಸಹಸ್ರಶಃ

ಎನ್ನನ್ನ ಕೃಪದಿ ಸಂರಕ್ಷಿಸೋ ಸತ್ ಜ್ಞಾನ ಕರ್ಮಜದೇವ 2


ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ಮುಕುಂದನ್ನ

ಸದಾ ದಯದಿ ಒಲಿಸೆನಗೆ ಪಾಹಿ ನಮೋ ಕೇತೋ 3 ಪ

***