Showing posts with label ತಿಳಿಯೋ ಮನವೇ ನಿಜ ಘನವಾ ಕಳಿಯೋ ಹಮ್ಮಿನ ಅವಗುಣವಾ gurumahipati. Show all posts
Showing posts with label ತಿಳಿಯೋ ಮನವೇ ನಿಜ ಘನವಾ ಕಳಿಯೋ ಹಮ್ಮಿನ ಅವಗುಣವಾ gurumahipati. Show all posts

Wednesday, 1 September 2021

ತಿಳಿಯೋ ಮನವೇ ನಿಜ ಘನವಾ ಕಳಿಯೋ ಹಮ್ಮಿನ ಅವಗುಣವಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ತಿಳಿಯೋ ಮನವೇ ನಿಜ ಘನವಾ | ಕಳಿಯೋ ಹಮ್ಮಿನ ಅವಗುಣವಾ ಪ 


ಸದ್ಗುರು ಶರಣವ ನೀ ಬ್ಯಾಗ | ಸದ್ಗುಣದಲಿಹುದು ಜಗದೊಳಗ | ತದ್ಗತ ಬೋಧವರೆದು ಈಗ | ಸದ್ಗತಿ ಕಾಣಿಸುವದು ನಿನಗ 1 

ಪಿಡಿಯದೆ ನಾನಾ ಬಯಕೆಯನು | ತಡೆಯದೆ ಬಿಡು ಕುಜನಾಶ್ರಯನು | ಇಡು ಗುರು ಪದ ಭಕುತಿಯನು | ಪಡೆ ದೃಷ್ಟಿಯ ಘನ ಸಮತೆಯನು 2 

ಬ್ಯಾರೆ ಬ್ಯಾರೆ ನಗದಾಕಾರಾ | ತೋರಿದರೇನದು ಬಂಗಾರಾ | ಈ ರೀತಿ ಮಾಯದ ವ್ಯವಹಾರಾ | ಈರೇಳು ಜಗ ಚಿನ್ಮಯ ಸಾರಾ 3 

ಗೋಡಿಯಿಂದಲಿ ಚಿತ್ರಗಳೆಲ್ಲಾ | ರೂಢಿಸಿ ದೋರಿತು ಜನರೆಲ್ಲಾ | ಆಡಲು ಯರಡಕ ಹೊರತಿಲ್ಲಾÀ | ನೋಡಲಾಯಿತು ತಾನೇಯಲ್ಲಾ 4 

ಹಾಲುಕ್ಕಿದ ಸೋರೆಯ ಪರಿಯಾ | ಜ್ಯಾಳಿಸಬ್ಯಾಡಾ ಯುವ ಬರಿಯಾ | ಕೇಳಿಕೋ ಮಹಿಪತಿ ಸುತ ಧೋರಿಯಾ | ಬಾಳು ಗಳೆದು ದುಸ್ತರಿಯಾ 5

****