Showing posts with label ಮಾತು ಮಾತಿಗೆ ಮರೆಯಬೇಡ ಸೀತಾರಾಮನ rangesha vittala. Show all posts
Showing posts with label ಮಾತು ಮಾತಿಗೆ ಮರೆಯಬೇಡ ಸೀತಾರಾಮನ rangesha vittala. Show all posts

Wednesday, 1 September 2021

ಮಾತು ಮಾತಿಗೆ ಮರೆಯಬೇಡ ಸೀತಾರಾಮನ ankita rangesha vittala

 ರಾಗ - : ತಾಳ -


ಮಾತು ಮಾತಿಗೆ ಮರೆಯಬೇಡ ಸೀತಾರಾಮನ ll ಪ ll


ಮಾತರಿಶ್ವನಾಥನು ಪ್ರೀತನಾಗುವ ll ಆ ಪ l


ಹನುಮ ತಾನು ಭಕ್ತಿಯಿಂದ ನೆನೆದು ಸುಖಿಸುತ

ವನಜ ಸಂಭವ ಪದವಿ ಪೊಂದಿದ ಘನತರನ ಮಾತ ll 1 ll


ಅಬಲೆಯನ್ನು ಕುಲಕೆ ತಂದ ಪ್ರಬಲನ ಮಾತ

ಶಬರಿಯೆಂಬ ಭಕ್ತಳಿಗೆ ಅಭಯವಿತ್ತವನ ಮಾತ ll 2 ll


ಅಂಗಜವೈರಿ ಶ್ರೀ ಶಿವನು ಹಿಂಗದೆ ಭಜಿಪ

ರಂಗೇಶವಿಟ್ಠಲನೆಂಬುವ ಮಂಗಳನ ಮಾತ ll 3 ll

***