..
ಬಾರೆ ಸಖಿ ವಾರಿಜ ಮುಖಿ ಬಾರೆ ಬಾರೆ ಸಖಿ ಬಾರೆ ಕೋಪಿಸೋರೆ ಹೀಗೆ ಯಾರುಪದೇಶವುಮುರಾರಿಯ ಮುಖ್ಯ ಬಲರಾಮನ ಸಖಿಯೆಬಾರೆ ಬಾರೆ ವಾರಿಜ ಮುಖಿಯೆ ಪ.
ಪುಟ್ಟ ಸುಭದ್ರಾ ನಿನಗೆ ಸಿಟ್ಯಾಕ ಒದಗಿತಇಟ್ಟ ಮುದ್ರಿಗಳು ತಡವಾಗಿಇಟ್ಟ ಮುದ್ರಿಗಳು ತಡವಾಗಿ ಮುಯ್ಯವಇಷ್ಟು ಹೊತ್ತನಾಗೆ ತರಬಹುದೆ 1
ಕೇಳೆ ಸುಭದ್ರಾ ಮುಯ್ಯಾ ಕಾಳ ರಾತ್ರಿಲೆ ತಂದುಭಾಳ ಕೋಪಿಸುವ ಬಗಿ ಹೇಳಭಾಳ ಕೋಪಿಸುವ ಬಗಿ ಹೇಳ ಮುತ್ತಿನ ತೋಳುತಾಯಿತವ ಕೊಡುವೆನ 2
ಧಿಟ್ಟ ಸುಭದ್ರಾ ಮುಯ್ಯಾ ಇಷ್ಟೊತ್ತ್ತಿನಾಗ ತಂದು ಸಿಟ್ಟು ಮಾಡಿದ ಬಗಿ ಹೇಳಸಿಟ್ಟು ಮಾಡಿದ ಬಗಿ ಹೇಳ ಮುತ್ತಿನ ಕಟ್ಟಾಣಿ ಕೊಡುವೆ ನಿನಗಿನ್ನು3
ಲೋಕನಾಯಕಿ ಕೃಷ್ಣ್ಣಿ ಕೋಪವ್ಯಾ ಕೊದಗಿತಹಾಕಿದ ಮುದ್ರಿ ತಡವಾಗಿ ಹಾಕಿದ ಮುದ್ರಿ ತಡವಾಗಿ ಮುಯ್ಯವ ಈ ಕಾಲದೊಳಗೆ ತರಬಹುದೆ4
ಕೆಂಡದಂಥವಳ ಗುಣ ಕಂಡೇವ ಸಭೆಯೊಳು ಚಂಡಿತನವನೆ ಬಿಡು ಕೃಷ್ಣಿಚಂಡಿತನವನೆ ಬಿಡು ಕೃಷ್ಣಿ ಮುತ್ತಿನ ದಂಡೆ ಕೊಡುವೆ ಬಿಡುಕೋಪ5
ಬೆಂಕಿಯಂಥವಳ ಗುಣ ಶಕ್ಯವೆ ವರ್ಣಿಸಲು ಶಂಕರಾದ್ಯರಿಗೆ ವಶವಲ್ಲಶಂಕರಾದ್ಯರಿಗೆ ವಶವಲ್ಲ ಮುತ್ತಿನ ವಂಕಿಯ ಕೊಡುವೆ ನಿನಗಿನ್ನು 6
ಸತಿಯು ಸುಭದ್ರೆ ನೀನು ಯತಿಯ ಬೆನ್ಹತ್ತಿದಾಗ ಅತಿಭೀತಿ ಎಲ್ಲಿ ಅಡಗಿತ್ತಅತಿಭೀತಿ ಎಲ್ಲಿ ಅಡಗಿತ್ತ ನಾವುನಿನ್ನ ಪತಿವ್ರತ ತನವ ಅರಿವೆನೆ7
ಮಿತ್ರೆಯರು ನಾವೆಲ್ಲ ತುಪ್ಪಅನ್ನವನುಂಡುಪುತ್ರರ ಸಹಿತ ಸುಖನಿದ್ರೆಪುತ್ರರ ಸಹಿತ ಸುಖನಿದ್ರೆ ಗೈವಾಗ ಮತ್ತ ನೀ ಮುಯ್ಯ ತರಬಹುದೆ8
ಲೋಲ ರಾಮೇಶನು ಹಾಲು ಅನ್ನವನುಂಡುಬಾಲರ ಸಹಿತ ಸುಖನಿದ್ರೆಬಾಲರ ಸಹಿತ ಸುಖನಿದ್ರೆ ಗೈವಾಗಮ್ಯಾಲೆ ಮುಯ್ಯ ತರಬಹುದೆ9
****