ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೋ ನನ್ಮ ಸ್ವಾಮಿ ಗುರು ಅಂತರ್ಯಾಮಿ ಕರುಣಸಾರ ಬೀರುತಿಹ್ಯ ಶರಣಜನಪ್ರೇಮಿ 1
ಬೇಡಿ ನಿನ್ನ ಕೊಂಬೆ ನಿನ್ನ ನೋಡಿ ಬಲಗೊಂಬೆ ಕಡಿಯುಗಾಣಿಸುವ ನೀನೆ ಒಡಿಯ ನನಗೆಂಬೆ 2
ಪಾದಪೂಜೆ ಮಾಡೆ ಸಾಧಿಸಿನ್ನು ನೋಡೆ ಭೆದಿಸನುದಿನ ನಿಜಬೋಧ ಬೆರದಾಡೆ 3
ಕಾಣಲಿಕ್ಕೆ ಉಬ್ಬೆ ನೆನದು ನಿಮ್ಮ ಕೊಬ್ಬ್ಯ ನಾನು ನೀನೆಂಬಹಂಭಾವ ಇದೆ ಧಬೆ 4
ನಿತ್ಯ ಪ್ರತಿಗೆ ದೀನ ಮಹಿಪತಿಗೆ ಭಾನುಕೋಟಿತೇಜ ನೀನೆ ಬೇಕು ಸುಭಗುತಿಗೆ 5
***