Showing posts with label ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾವಡಗಾಡಿ ವಸಡುಗ ಪಾವುಗೆ vaikunta vittala. Show all posts
Showing posts with label ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾವಡಗಾಡಿ ವಸಡುಗ ಪಾವುಗೆ vaikunta vittala. Show all posts

Sunday, 1 August 2021

ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾವಡಗಾಡಿ ವಸಡುಗ ಪಾವುಗೆ ankita vaikunta vittala

..

kruti by ಬೇಲೂರು ವೈಕುಂಠ ದಾಸರು belur vaikunta dasaru


ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾ

ವಡಗಾಡಿ ವಸಡುಗ ಪಾವುಗೆ ಸುವರ್ಣದರ್ಪಣವಾ ಪ


ಪಿಡಿದ ನಾರಿಯರು ಯಡಬಲದ ಕೈದೀವಿಗೆಯ

ಕೊಡುತ ಕೈಲಾಗಿನವರಡಿಗಳೆಚ್ಚರಿಕೇ ಅ.ಪ


ವೀಣೆ ದಂಡಿಗೆ ತಾಳ ಮೇಳ ಸನಕಾದಿ ಸುರ

ನಾರಿಯರು ಗೀತ ಪ್ರಬಂಧ ನರ್ತನದ ಪು

ರಾಣ ಕೋವಿದರು ಪಾಠಕನಿಕರ ಸಹಿತ ಗೀ

ರ್ವಾಣರೈದಿರಲು ಅವಧಾನವೆಚ್ಚರಿಕೇ 1


ಗಂಧ ಪರಿಮಳ ಪುಷ್ಪ ತಾಂಬೂಲ ಫಲಗಳನು

ತಂದು ಉಡುಗೊರೆಯ ಕಾಣೆಕೆಯಿಟ್ಟು ಜಯವೆನುತ

ನಂದ ಮುಕುಂದ ಗೋವಿಂದ ಕೇಶವಯೆನುತ

ವಂದನೆಗಳನೆ ಮಾಡಿ ನಿಂದರೆಚ್ಚರಿಕೇ 2


ಭಾಗವತ ಜನರು ಬಿರುದಾವಳಿಯ ಪೊಗಳೆ ಮುನಿ

ಯೋಗಿಗಳು ತತ್ವ ಪ್ರಬಂಧದಧ್ಯಾಪಕರು

ಮೇಘವಾಹನ ಪೂಮಳೆಗರೆಯೆ ಸಕಲ ವಿನಿ

ಯೋಗದವರನು ಕಳುಹುವಾಗಲೆಚ್ಚರಿಕೇ3


ಸರಸಿಜೋದ್ಭವನು ದಿಕ್ಪಾಲನಾರದ ಧ್ರುವನು

ಗರುಡ ಗಂಧರ್ವ ವಿದ್ಯಾಧರರು ಅನಿಲಜನು

ಪರಮ ಭಕ್ತಿಯಲಿ ಊಳಿಗಕೆ ಬಂದೈದಾರೆ

ಧರೆಗಧಿಕ ವೈಕುಂಠ ಚನ್ನ ಕೇಶವ ಚಿತ್ತೈಸೋ 4

***